ಭಟ್ಕಳ (Bhatkal) : ಬೈಕೊಂದು ಡಿಕ್ಕಿ ಹೊಡೆದ (Bike Accident) ಪರಿಣಾಮ ಪಾದಚಾರಿ ಮಹಿಳೆ ಮತ್ತು ಬೈಕ್‌ ಹಿಂಬದಿ ಸವಾರ ಗಾಯಗೊಂಡ ಘಟನೆ ಜ.೩೦ರಂದು ಸಂಜೆ ೭.೧೫ರ ಸುಮಾರಿಗೆ ಭಟ್ಕಳ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಹೆಬಳೆ ವರಕೊಡ್ಲ ನಿವಾಸಿ ತಹಸೀನ್‌ ಬಾನು (೪೦) ಗಾಯಗೊಂಡ ಪಾದಚಾರಿ ಮಹಿಳೆ. ಬೈಕ್‌ ಸವಾರ ಭಟ್ಕಳ ಕೋಟೇಶ್ವರ ನಿವಾಸಿ ಪ್ರದೀಪ ರವಿ ಹರಿಜನ (೨೩) ವಿರುದ್ಧ ಗಾಯಾಳು ಮಹಿಳೆಯ ಗಂಡ ರಿಯಾಜ್‌ ಅಹ್ಮದ್‌ ಸಾಬ್‌ ದೂರು (Complaint) ದಾಖಲಿಸಿದ್ದಾರೆ. ಶಹರದ ಸಿಟಿ ಲೈಟ್‌ ಕ್ರಾಸ್‌ ಹತ್ತಿರ ಮುರಿನಕಟ್ಟೆ ಕಡೆಯಿಂದ ಸಿಟಿಲೈಟ್‌ ಕ್ರಾಸ್‌ ಕಡೆಗೆ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಭಟ್ಕಳದಿಂದ ಹೊನ್ನಾವರ (Honnavar) ಕಡೆಗೆ ಹೋಗುತ್ತಿದ್ದ ಬೈಕ್‌ ಹೊಡೆದಿದೆ (Bike Accident). ಬೈಕ್‌ ಹಿಂಬದಿ ಕುಳಿತಿದ್ದ ನಂದಾ ಅಮವಾಸ್ಯೆ ಆದಿದ್ರಾವಿಡ ಕೂಡ ಗಾಯಗೊಂಡಿದ್ದಾರೆ. ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ARREST / ತಲೆಮರೆಸಿಕೊಂಡಿದ್ದ ಆರೋಪಿ ಮುರ್ಡೇಶ್ವರದಲ್ಲಿ ಬಂಧನ