ಭಟ್ಕಳ (Bhatkal): ಅರಣ್ಯ ಪ್ರದೇಶದಲ್ಲಿ ಅಂದರ ಬಾಹರ ಆಡುತ್ತಿದ್ದ ೭ ಜನರ ಮೋಟಾರ್‌ ಸೈಕಲ್‌ ವಶಕ್ಕೆ ಪಡೆದ (Bike seized) ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರೆಲ್ಲರೂ ಭಟ್ಕಳ ತಾಲೂಕಿನವರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನೂಜ್‌ ಕೆಕ್ಕೋಡ ವಾಸಿಗಳಾದ ಆನಂದ ತಿಮ್ಮಪ್ಪ ಗೊಂಡ (೩೮) ಮತ್ತು ಕೃಷ್ಣ ಗೊಂಡ, ಹದ್ಲೂರಿನ ಅಣ್ಣಪ್ಪ ಗೊಂಡ ಮತ್ತು ಶ್ರೀಧರ ಗೊಂಡ, ಸಬ್ಬತ್ತಿಯ ಮನೋಜ ನಾಯ್ಕ ಮತ್ತು ಚಂದ್ರ ಶನಿವಾಯ ನಾಯ್ಕ ಹಾಗೂ ಕಿತ್ತೆ ನಿವಾಸಿ ಕುಪ್ಪಯ್ಯ ಗೊಂಡ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರು ನಿನ್ನೆ ಸೆ.೨೨ರಂದು ಸಂಜೆ ೪.೪೫ರ ಸುಮಾರಿಗೆ ಮಾರುಕೇರಿ ಗ್ರಾಮ ಪಂಚಾಯತ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್‌ ಜೂಗರಾಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರಿಗೆ ಒಬ್ಬ ಆರೋಪಿ ಸ್ಥಳದಲ್ಲಿ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ. ೪೦೦ ರೂ. ನಗದು ಮತ್ತು ೭ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Bike seized).  ಭಟ್ಕಳ ಗ್ರಾಮೀಣ ಠಾಣೆ ಪಿಐ ಚಂದನ್‌ ಗೋಪಾಲ್‌ ವಿ. ಪ್ರಕರಣ ದಾಖಲಿಸಿಕೊಂಡು (case registered), ಮುಂದಿನ ಕ್ರಮಕೈಗೊಂಡಿದ್ದಾರೆ.