ಭಟ್ಕಳ (Bhatkal) : ತಾಲೂಕಿನ ಬೈಲೂರು ಕ್ರಾಸ್ ಬಳಿಯಲ್ಲಿ ಶನಿವಾರ ಬೆಳಗಿನ ಜಾವ ಕಂಟೇನರ್ ಲಾರಿ (Lorry) ಚಾಲಕನ ನಿರ್ಲಕ್ಷತನಕ್ಕೆ ಹೊನ್ನಾವರದ ಕಡೆಯಿಂದ ಭಟ್ಕಳದ ಕಡೆಗೆ ತೆರಳುತ್ತಿದ್ದ ಬೈಕ್ ಸವಾರನೊರ್ವ ಅಪಘಾತಕ್ಕೊಳಗಾಗಿ (accident) ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಈ ಕುರಿತು ಮುರ್ಡೇಶ್ವರ (Murdeshwar) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತ ಬೈಕ್ ಸವಾರ ಬಾಗಲಕೋಟ (Bagalkot) ಜಿಲ್ಲೆಯ ಇಳಕಲ ತಾಲೂಕಿನ ವಜ್ಜಲ್ ನಿವಾಸಿ ಮಲ್ಲಪ್ಪ ರಮೇಶ ಚಲವಾದಿ( ೨೪)  ಎಂದು ತಿಳಿದು ಬಂದಿದ್ದು. ಸದ್ಯ ಮಂಗಳೂರಿನ (Mangaluru) ಎರ್ ಪೋರ್ಟ್ ರಸ್ತೆ ಸಮೀಪ ವಾಸವಾಗಿದ್ದನು. ಉತ್ತರ ಪ್ರದೇಶದ (Uttara Pradesh) ವಾರಣಾಸಿಯ (Varanasi) ಪಿಂಡ್ರಾ ತಾಲೂಕಿನ ಸುನೀಲ ಕುಮಾರ ಅಪಘಾತ ಪಡಿಸಿದ ಚಾಲಕ. ಈತನು ಹೊನ್ನಾವರ (Honnavar) ಕಡೆಯಿಂದ ಭಟ್ಕಳದ ಕಡೆಗೆ ಕಂಟೇನರ ಲಾರಿಯನ್ನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದ. ರಾಷ್ಟ್ರೀಯ ಹೆದ್ದಾರಿ (National Highway)-೬೬ರ ಹೊನ್ನಾವರ-ಭಟ್ಕಳ ರಸ್ತೆಯ ಹವ್ಯಕ ಸಭಾಭವನದ ಎದುರಿಗೆ ತನ್ನ ಹಿಂಬದಿ ಬರುವ ವಾಹನಕ್ಕೆ ಯಾವುದೇ ಸೂಚನೆ ನೀಡದೇ ಒಮ್ಮಲೆ ಕಂಟೇನರ್ ಲಾರಿಯನ್ನು ನಿಧಾನ ಮಾಡಿದ್ದರಿಂದ ಅಪಘಾತ (accident) ಸಂಭವಿಸಿದೆ.

ಇದನ್ನೂ ಓದಿ : Memorandum/ಗರ್ಭಿಣಿ ಗೋ ಹಂತಕರ ಬಂಧನಕ್ಕೆ ಹಿಂಜಾವೇ ಆಗ್ರಹ

ಚಾಲಕನ ನಿರ್ಲಕ್ಷ್ಯತನಕ್ಕೆ ಅದೇ ಮಾರ್ಗದಲ್ಲಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಮೋಟಾರ ಸೈಕಲ್ ಸವಾರನಿಗೆ ಲಾರಿಯ ಹಿಂಬದಿಗೆ ಡಿಕ್ಕಿ ಆಗುವಂತೆ ಮಾಡಿದ್ದಾನೆ. ಅಪಘಾತದಿಂದ ಮೋಟರ್ ಸೈಕಲ್ ಸವಾರನ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಬೈಲೂರಿನ ದೊಡ್ಡಬಲ್ಸೆ ನೀರಗದ್ದೆ ನಿವಾಸಿ ಗಣಪತಿ ಈರಯ್ಯ ನಾಯ್ಕ ಈ ಕುರಿತು ದೂರು ನೀಡಿದ್ದಾರೆ. ಮುರ್ಡೇಶ್ವರ ಪಿಎಸ್‌ಐ ಹಣುಮಂತ ಬಿರಾದಾರ ಪ್ರಕರಣ (complaint) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : Special team / ಗರ್ಭಿಣಿ ಗೋವಧೆ ಆರೋಪಿಗಳ ಪತ್ತೆಗೆ ವಿಶೇಷ ತಂಡ