ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway) ದಾಟುತ್ತಿದ್ದ ಟಾಟಾ ಏಸ್ ವಾಹನ ಬೈಕಿಗೆ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡ (Biker injured) ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಮಂಕಿ ನವಾಯತ ಕೇರಿಯ ಉಮರ್ ಖತ್ತಾಬ್ ತಂದೆ ಅಬ್ಬಾಸ್ ಕಟ್ಟಿಂಗೇರಿ (೩೨) ಗಾಯಗೊಂಡ ಬೈಕ್ ಸವಾರ. ಟಾಟಾ ಏಸ್ ವಾಹನ ಚಾಲಕ ಮುರುಡೇಶ್ವರದ ದಿವಗೀರಿ ನಿವಾಸಿ ಮತ್ತೇಸ್ ತಂದೆ ಮಂತು ಲೂಯಿಸ್ ವಿರುದ್ಧ ದೂರು ದಾಖಲಾಗಿದೆ.

ಇದನ್ನು ಓದಿ: brain disease/ ಮೆದುಳು ರೋಗಕ್ಕೆ ಹೆದರಿದ ಮಹಿಳೆ ಮಾಡಿದ್ದೇನು? 

ದಿನಾಂಕ : ೦೯-೦೧-೨೦೨೬ರಂದು ಮಧ್ಯಾಹ್ನ ೨ :೦೦ ಗಂಟೆಯ ಸುಮಾರಿಗೆ ಟಾಟಾ ಎಸ್ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಸ್ತಿ ಮೀನು ಮಾರುಕಟ್ಟೆಯಿಂದ ದೇವಿಖಾನ ರಸ್ತೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-೬೬ನ್ನು ದಾಟುವಾಗ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ಸವಾರ ರಸ್ತೆಯಲ್ಲಿ ಬಿದ್ದು ಅವರ ತಲೆಯ ಒಳಭಾಗದಲ್ಲಿ ಭಾರಿ ಗಾಯವಾಗಿದೆ (Biker injured). ಈ ಕುರಿತು ಮಂಕಿ ನವಾಯತ ಕೇರಿಯ ಮೊಹಮ್ಮದ್ ಜಾಕೀರ್ ತಂದೆ ಮೊಹಮ್ಮದ್ ಮೀರಾ ಕಟ್ಟಿಂಗೇರಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: bodybuilding competition/ ೨೨ರಂದು ಭಟ್ಕಳದಲ್ಲಿ ರಾಜ್ಯಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆ