ಭಟ್ಕಳ (Bhatkal) : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ (Delhi Election) ಬಿಜೆಪಿ (BJP) ಬಹುಮತ ಪಡೆಯುವುದರ ಮೂಲಕ ೨೭ ವರ್ಷದ ಬಳಿಕ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಭಟ್ಕಳ ಶಂಸುದ್ದಿನ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ (BJP Celebration) ಆಚರಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ಮಾತನಾಡಿ, ಕಳೆದ ೧೦ ವರ್ಷಗಳಿಂದ ಅರವಿಂದ ಕೇಜ್ರಿವಾಲ (Arvind Kejriwal) ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದರು. ಆದರೆ ಈಗ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ (AAP) ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಮುಳುಗಿ ಹೋಗಿದೆ. ಮತದಾರರು ಈ ಬಾರಿ ಭಾರತೀಯ ಜನತಾ ಪಾರ್ಟಿಯ ಮೇಲೆ ವಿಶ್ವಾಸವನ್ನಿಟ್ಟು ಹಾಗೂ ನರೇಂದ್ರ ಮೋದಿಯವರ (Narendra Modi) ಮೇಲೆ ನಂಬಿಕೆಯನ್ನಿಟ್ಟು ಅತಿ ಹೆಚ್ಚು ಸೀಟ್ ಗಳನ್ನು ಗೆಲ್ಲಿಸುವುದರ ಮೂಲಕ ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಗದ್ದುಗೆಗೆ ಏರಿಸಿದ್ದಾರೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : boat sink/ ಬೋಟ್ ಮುಳುಗಿ ೬೦ ಲಕ್ಷ ರೂಪಾಯಿ ನಷ್ಟ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ದೆಹಲಿಯಲ್ಲಿ ೨೭ ವರ್ಷಗಳ ಬಳಿಕ ನಮ್ಮ ಬಿಜೆಪಿ ಪಕ್ಷ ಭರ್ಜರಿಯಾಗಿ ಬಹುಮತ ಪಡೆಯುದರ ಮೂಲಕ ಅಧಿಕಾರಕ್ಕೆ ಬರುತ್ತಿದೆ. ೭೦ ವಿಧಾನಸಭಾ ಕ್ಷೇತ್ರದಲ್ಲಿ ೪೮ ಕ್ಷೇತ್ರ ಗೆಲ್ಲುವ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.  ಮೋದಿಯವರ ನೇತೃತ್ವದಲ್ಲಿ ನಡೆದ ಈ ಚುನಾವಣೆ ಅಹಂಕಾರಿ ಕೇಜ್ರಿವಾಲ್ ಗೆ ಮತದಾರರು ಬುದ್ದಿ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇಜ್ರಿವಾಲ್ ಸುಧಾರಿಸಿಕೊಳ್ಳಲಿ ಎಂದರು.

ಇದನ್ನೂ ಓದಿ : Uttara Kannada/ ಇನ್ನು ಮುಂದೆ ಶನಿವಾರ ಅರ್ಧ ದಿನ ಶಾಲೆ

ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಮೋದಿಯವರ ಅವಧಿ ಮುಗಿಯಿತು ಎಂದು ಹೇಳಿದವರಿಗೆ ಇದೊಂದು ಪಾಠವಾಗಿದೆ.  ರಾಹುಲ್ ಗಾಂಧಿ (Rahul Gandhi) ಕನ್ಯಾಕುಮಾರಿಯಿಂದ (Kanyakumari) ದೆಹಲಿಯವರೆಗೆ ಪಾದಯಾತ್ರೆ ಮಾಡಿದ ಪುಣ್ಯಾತ್ಮ. ಇಂದು ದೆಹಲಿಯಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ.  ಈ ವೇಳೆ ಕರ್ನಾಟಕದಲ್ಲಿ (Karnataka) ಚುನಾವಣೆಯಾದರು ಕೂಡ ನಾವು ಅಭೂತಪೂರ್ವ ವಾಗಿ ಗೆಲುವು ಸಾಧಿಸುತ್ತೇವೆ ಎನ್ನುವುದಕ್ಕೆ ದೆಹಲಿಯ ಫಲಿತಾಂಶ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ : Vardhanti / ಕರಿಕಲ್‌ ಗ್ರಾಮದಲ್ಲಿ ಪಂಚಮ ವರ್ಧಂತಿ ಮಹೋತ್ಸವ

ಮುಖಂಡ ಭಾಸ್ಕರ ದೈಮನೆ ಮಾತನಾಡಿ, ಆಮ್‌ ಆದ್ಮಿ ಪಕ್ಷದ ಕೇಜ್ರಿವಾಲ್ ದುರಹಂಕಾರ ಮತ್ತು ಕೆಳಮಟ್ಟದ ಆಡಳಿತದಿಂದ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ ಎಂದರು. ಈ ಸಂದರ್ಭದಲ್ಲಿ (BJP Celebration) ಬಿಜೆಪಿ ಮುಖಂಡರಾದ ರಾಜೇಶ ನಾಯ್ಕ, ದಿನೇಶ ನಾಯ್ಕ, ಮೋಹನ ನಾಯ್ಕ ಮತ್ತಿತರರು ಇದ್ದರು.

ಬಿಜೆಪಿ ಸಂಭ್ರಮಾಚರಣೆಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ರೀಲ್ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ : SDPI/ ಸಚಿವ ಮಂಕಾಳ ವೈದ್ಯ ವಿರುದ್ಧ ಎಸ್‌ಡಿಪಿಐ ಕೆಂಡ