ಭಟ್ಕಳ (Bhatkal) : ಮೀನುಗಾರಿಕೆ (fishing) ಮುಗಿಸಿ ಮರಳುತ್ತಿದ್ದ ವೇಳೆ ಬೋಟ್ ಮುಳುಗಡೆಯಾದ (boat sink) ಘಟನೆ ಭಟ್ಕಳ ಬಂದರಿನಲ್ಲಿ ನಡೆದಿದೆ. ಬಲೆ ಹಾಗೂ ಸ್ವತ್ತುಗಳು ಸೇರಿದಂತೆ ಬೋಟ್ ಸಹಿತ ಮುಳುಗಡೆಯಾಗಿ ಸುಮಾರು ೬೦ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಬೋಟಿನಲ್ಲಿದ್ದ ಆರು ಮೀನುಗಾರರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ (Brahmavar) ತಾಲೂಕಿನ ಬಾಳೆಹಿತ್ತಲು ಸುರೇಶ ಹಾಗೂ ಪತ್ನಿ ಅಶ್ವಿನಿ ಅವರಿಗೆ ಸೇರಿದ ವಿನಾಶ್ ಬೋಟ್ ಇದಾಗಿದೆ. ಭಟ್ಕಳದ ಮಾವಿನಕುರ್ವೆ ನಿವಾಸಿ ಉಮೇಶ ಮೊಗೇರ ಎಂಬುವವರು ಬೋಟ್‌ನ ಚಾಲಕರಾಗಿದ್ದರು. ಇವರು ಫೆಬ್ರವರಿ ೨ರಂದು ಐದು ಜನ ಮೀನುಗಾರರನ್ನು ಕರೆದುಕೊಂಡು ಮೀನುಗಾರಿಕೆ ಮಾಡುತ್ತಾ ಕುಮಟಾ ವ್ಯಾಪ್ತಿಗೆ ತೆರಳಿದ್ದರು.

ಇದನ್ನು ಓದಿ : Uttara Kannada/ ಇನ್ನು ಮುಂದೆ ಶನಿವಾರ ಅರ್ಧ ದಿನ ಶಾಲೆ

ಫೆಬ್ರುವರಿ ೫ ರಂದು ಬೆಳಿಗ್ಗೆ ಸುಮಾರು ೩ ಗಂಟೆಗೆ ಮೀನುಗಾರಿಕೆ ಮುಗಿಸಿ ಮರಳುತ್ತಿದ್ದ ವೇಳೆ ಕಲ್ಲು ತಗುಲಿದ ಪರಿಣಾಮ ಬೋಟಿನ ಅಡಿಭಾಗ ಒಡೆದು ನೀರು ನುಗ್ಗಿದೆ. ಇದರಿಂದಾಗಿ ಬೋಟು ಮುಳುಗಲಾರಂಭಿಸಿದೆ (Boat sink). ಇದೇ ಸಂದರ್ಭ ನಾಡದೋಣಿಯಲ್ಲಿದ್ದ ರಾಮಾ ಮೊಗೇರ, ಭರತ ಮೊಗೇರ ಸಹಾಯಕ್ಕೆ ಧಾವಿಸಿ, ಎಲ್ಲ ಆರು ಮಂದಿಯನ್ನು ರಕ್ಷಿಸಿದ್ದಾರೆ. ಇನ್ನು ನೋಡ ನೋಡುತ್ತಿದ್ದಂತೆ ಬೋಟ್ ನೀರಿನಲ್ಲಿ ಮುಳುಗಡೆಯಾಗಿದೆ.

ಇದನ್ನು ಓದಿ : Vardhanti / ಕರಿಕಲ್‌ ಗ್ರಾಮದಲ್ಲಿ ಪಂಚಮ ವರ್ಧಂತಿ ಮಹೋತ್ಸವ

ಬೋಟಿನಲ್ಲಿದ್ದ ಬಲೆ, ಪೋಲೋಕ್, ಡೈನಮ್, ಬ್ಯಾಟರಿ, ಗುಂಡು ಸೇರಿದಂತೆ ಅನೇಕ ಸಾಮಗ್ರಿಗಳಿದ್ದು ಸುಮಾರು ೫೦ ರಿಂದ ೬೦ ಲಕ್ಷ ರೂ. ನಷ್ಟವಾಗಿದೆ ಎಂದು ಉಮೇಶ ಮೊಗೇ‌ರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬೋಟ್ ಮುಳುಗಡೆಯಾಗುತ್ತಿರುವ ವಿಡಿಯೋವನ್ನು  ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನು ಓದಿ : SDPI/ ಸಚಿವ ಮಂಕಾಳ ವೈದ್ಯ ವಿರುದ್ಧ ಎಸ್‌ಡಿಪಿಐ ಕೆಂಡ