ಭಟ್ಕಳ ಡೈರಿ ವರದಿ
ಭಟ್ಕಳ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಬೊಲೆರೋ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದ (Bolero collision) ಪರಿಣಾಮ ಸ್ಕೂಟಿ ಸವಾರ ಗಾಯಗೊಂಡ ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ (police station) ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ (National Highway)-೬೬ರಲ್ಲಿ ನಡೆದಿದೆ.
budget meeting/ ಭಟ್ಕಳ ತಾಲೂಕು ಪಂಚಾಯತಿಯ ಬಜೆಟ್ ಸಭೆ ಯಾವಾಗ ಗೊತ್ತಾ?
ಭಟ್ಕಳ (Bhatkal) ತಾಲೂಕಿನ ಬೆಂಗ್ರೆ-೦೧, ಮಾವಿನಕಟ್ಟೆ ನಿವಾಸಿ ನೀಲಕುಮಾರ ಮಂಜಯ್ಯ ಜೈನ್ (೬೨) ಗಾಯಗೊಂಡವರು. ಅವರು ಆಗಸ್ಟ್ ೨೮ರಂದು ಸಂಜೆ ೫.೪೫ರ ಸುಮಾರಿಗೆ ಟಿವಿಎಸ್ ಸ್ಕೂಟಿಯಲ್ಲಿ (Scooty) ಭಟ್ಕಳದಿಂದ ಮುರುಡೇಶ್ವರ (Murdeshwar) ಕಡೆಗೆ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ತೆರಳುತ್ತಿದ್ದರು. ತೆರ್ನಮಕ್ಕಿ ರಾಮೇಶ್ವರ ಕೇಫೆ ಸಮೀಪಕ್ಕೆ ಬಂದಾಗ, ಹಿಂಬದಿಯಿಂದ ಬಂದ ಕೆಎ-೨೭/ಸಿ-೮೭೪೮ ನೋಂದಣಿ ಸಂಖ್ಯೆಯ ಬೊಲೆರೋ ವಾಹನದ ಚಾಲಕ ಅತಿವೇಗ ಹಾಗೂ ದುಡುಕಿನಿಂದ ವಾಹನ ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ (Bolero collision) ಎನ್ನಲಾಗಿದೆ.
electric shock/ ವಿದ್ಯುತ್ ಶಾಕ್‌ಗೆ ಕೂಲಿ ಕಾರ್ಮಿಕ ಸಾವು
ಡಿಕ್ಕಿಯ ರಭಸಕ್ಕೆ ನೀಲಕುಮಾರ ಅವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಬಲ ಭುಜಕ್ಕೆ ಒಳನೋವು ಉಂಟಾಗಿದೆ. ಅಪಘಾತಕ್ಕೆ ಕಾರಣವಾದ ಬೊಲೆರೋ ಚಾಲಕನ ಹೆಸರು ಹಾಗೂ ವಿಳಾಸ ತಿಳಿದುಬಂದಿಲ್ಲ. ಈ ಕುರಿತು ಗಾಯಾಳುವಿನ ಸಹೋದರ ಪಾರ್ಶ್ವನಾಥ ಮಂಜಯ್ಯ ಜೈನ್ ಅವರು ಆಗಸ್ಟ್ ೨೯ರಂದು ಸಂಜೆ ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು (complaint registered), ಬೊಲೆರೋ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
martyred soldier/ ಹುತಾತ್ಮ ಯೋಧ ವಿನೋದ ನಾಯ್ಕರ ೨೧ನೇ ಪುಣ್ಯತಿಥಿ ಆಚರಣೆ
