ಕಾರವಾರ : ಗೋವಾ ಮತ್ತು ಕಾರವಾರ ಸಂಪರ್ಕಿಸುವ ಕೋಡಿಬಾಗ ಬಳಿಯ ಕಾಳಿ ನದಿ ಸೇತುವೆ ರಾತ್ರಿ ೧.೫೦ರ ಸುಮಾರಿಗೆ ಕುಸಿದು ಬಿದ್ದಿದೆ(Bridge collapsed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಅವಘಡದಲ್ಲಿ ವಾಹನವೊಂದು ಸಿಲುಕಿದ್ದು, ಓರ್ವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇರಳ ಮೂಲದ ಲಾರಿ ಚಾಲಕ ರಾಧಾಕೃಷ್ಣ ಎಂಬುವವರು ಗಾಯಗೊಂಡವರು. ಚತುಷ್ಪತ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಐಆರ್ಬಿ ಕಂಪನಿ ಈ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಸೇತುವೆ ಮಾಡಿದ್ದರಿಂದ ಏಕ ಮುಖ ಸಂಚಾರ ನಡೆಯುತ್ತಿತ್ತು. ಇದೀಗ ಹಳೇ ಸೇತುವೆ ಕುಸಿತ (Bridge collapsed) ಸಂಚಾರ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ : ಮುಗಿಲೆತ್ತರ ಧಗದಹಿಸಿದ ಬೆಂಕಿ – ಮೂವರ ಸ್ಥಿತಿ ಗಂಭೀರ
ಅವಘಡದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ೬೬ಲ್ಲಿ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್ಬಿ ಕಂಪನಿ ಕಾಳಿ ನದಿ ಸೇತುವೆಯ ಭದ್ರತೆ ಕುರಿತು ವರದಿ ನೀಡುವವರೆಗೆ ಸಂಚಾರ ನಿಷೇಧ ಇರಲಿದೆ. ಇನ್ನೊಂದೆಡೆ ಸೇತುವೆ ಕುಸಿತ ಹಿನ್ನೆಲೆ ಐಆರ್ಬಿ ಕಂಪನಿ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ಜಾಲಿ ಪ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
೧೯೮೬ರಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆ ಗೋವಾ ಮತ್ತು ಕರ್ನಾಟಕ ರಾಜ್ಯವನ್ನು ಸಂಪರ್ಕಿಸುತ್ತದೆ. ಈ ಸೇತುವೆ ಪ್ರವಾಸಿಗರನ್ನು ಆಕರ್ಷಿಸಿದ್ದಲ್ಲದೆ, ಹಲವಾರು ಜನರು ಈ ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವುದು ಮಾಮೂಲಿಯಾಗಿತ್ತು. ಸಾಯಂಕಾಲ ಸೂರ್ಯಾಸ್ತ ಮತ್ತು ಬೆಳಗಿನ ಸೂರ್ಯೋದಯದ ಸಂದರ್ಭದಲ್ಲಿ ಈ ಸ್ಥಳದಿಂದ ಪರಿಸರ ನಯನಮನೋಹರವಾಗಿ ಕಾಣುವುದರಿಂದ ಪ್ರವಾಸಿಗರಿಗೆ ಈ ಸೇತುವೆ ನೆಚ್ಚಿನ ಸ್ಥಳವಾಗಿತ್ತು.
ಇದನ್ನೂ ಓದಿ : ಮೀಸಲಾತಿ ಬಂದರೂ ಭಟ್ಕಳ ಪುರಸಭೆ ಅತಂತ್ರ