ಭಟ್ಕಳ: ಅನ್ಯಕಾರ್ಯದ ನಿಮಿತ್ತ ರವಿವಾರ ಭಟ್ಕಳಕ್ಕೆ (Bhatkal) ಆಗಮಿಸಿದ್ದ ವಿಧಾನಪರಿಷತ್ ಮಾಜಿ ಸದಸ್ಯ (Ex MLC), ನಿವೃತ್ತ ಸೇನಾಧಿಕಾರಿ ಕ್ಯಾ ಗಣೇಶ ಕಾರ್ಣಿಕ್ (Captain Ganesh Karnik) ಭಟ್ಕಳದ ಮಾಜಿ ಸೈನಿಕರನ್ನು (Ex Servicemen) ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ನಡೆದ ವಿಶೇಷ ಸಭೆಯಲ್ಲಿ ಭಟ್ಕಳದ ಮಾಜಿ ಸೈನಿಕರ ಪರವಾಗಿ ಸಂಘದ ಅಧ್ಯಕ್ಷ ಎಂ ಡಿ ಪಕ್ಕಿ ಶಾಲು ಹೊದೆಸಿ, ಭಟ್ಕಳ ಮಲ್ಲಿಗೆ ಹಾರ ಹಾಕಿ ಗಣೇಶ ಕಾರ್ಣಿಕ್ ಅವರನ್ನು ಗೌರವಿಸಿ, ಸ್ವಾಗತಿಸಿದರು. ಸಂಘದ ಸದಸ್ಯರ ಪರಿಚಯ ಮಾಡಿಕೊಂಡ ಗಣೇಶ ಕಾರ್ಣಿಕ್, ಸಮಾಜದಲ್ಲಿ ಮಾಜಿ ಸೈನಿಕರ ಜವಾಬ್ದಾರಿಯ ಬಗ್ಗೆ ವಿಚಾರ ವಿಮರ್ಶೆ ಮಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ಥಳೀಯ ಮಾಜಿ ಸೈನಿಕರಿಗೆ (Ex Servicemen) ಪ್ರಾಶಸ್ತ್ಯದ ಮೇರೆಗೆ ಭಟ್ಕಳದ ಲೈಟ್ ಹೌಸ್ ನಲ್ಲಿ (Light House) ಉದ್ಯೋಗ ನೀಡುವ ಬದಲು ಹೊರ ರಾಜ್ಯದವರನ್ನು ಉದ್ಯೋಗದಲ್ಲಿ ಮುಂದುವರಿಸುವ ಮೂಲಕ ಸ್ಥಳೀಯ ಮಾಜಿ ಸೈನಿಕರು ಉದ್ಯೋಗ ವಂಚಿತರಾಗಿರುವುದರ ಬಗ್ಗೆ ಸಂಘದ ಸದಸ್ಯರು ಗಮನಸೆಳೆದರು. ಮಾಜಿ ಸೈನಿಕರಿಗೆ ಗನ್ ಲೈಸೆನ್ಸ್ (gun licence) ನೀಡುವಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತವನ್ನು ಪೆಂಡಿಂಗ್ ಇಟ್ಟು ವಿಳಂಬ ಮಾಡುತ್ತಿರುವ ಬಗ್ಗೆಯೂ ಮುಖಂಡರು ಗಮನಕ್ಕೆ ತಂದರು. ಮಾಜಿ ಸೈನಿಕರ ಇನ್ನಿತರ ಕಲ್ಯಾಣಕಾರಿ ವಿಷಯಗಳನ್ನು ಚರ್ಚಿಸಲಾಯಿತು. ಎಲ್ಲ ವಿಚಾರಗಳನ್ನು ತಿಳಿದುಕೊಂಡ ಗಣೇಶ ಕಾರ್ಣಿಕ್, ಈ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ತ್ವರಿತವಾಗಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.
ಇದನ್ನೂ ಓದಿ: Bhatkal BJP/ ರಾಜ್ಯಾಧ್ಯಕ್ಷರ ಭೇಟಿಯಾದ ಭಟ್ಕಳ ಬಿಜೆಪಿ ನಿಯೋಗ
ಸಭೆಯ ನಂತರ ಆರೋಗ್ಯ ಸಮಸ್ಯೆಯಲ್ಲಿರುವ ಹಿರಿಯ ಸದಸ್ಯರಾದ ರಾಮ ನಾಯ್ಕ ಹಾಗೂ ನಾರಾಯಣ ನಾಯ್ಕ ಅವರ ಮನೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿ ಹಣ್ಣು ಹಂಪಲು ನೀಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸ್ವಾಗತಿಸಿ, ಮಾಜಿ ಸೈನಿಕರ ಪರಿಚಯ ಮಾಡಿಸಿದರು.
ಇದನ್ನೂ ಓದಿ: Appeal to the Governor/ ನಗರಸಭೆ ಸೇರ್ಪಡೆಗೆ ವಿರೋಧಿಸಿ ರಾಜ್ಯಪಾಲರಿಗೆ ಮನವಿ



