ಭಟ್ಕಳ: ಶಿರಸಿಯ (Sirsi) ಗಣೇಶ ನಗರದ ಧನ್ಯ ಹೆಗಡೆ ಅವರು ಚಲಾಯಿಸುತ್ತಿದ್ದ ಕಾರು ಭಟ್ಕಳದ ಬಳಿ ಪೊಲೀಸ್ ಅಧಿಕಾರಿಯೊಬ್ಬರ ಬೈಕಿಗೆ ಗುದ್ದಿದೆ. ಬೈಕ್ ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು (PSI injured), ಹಿಂಬದಿ ಸವಾರ ಅವರ ಪತ್ನಿಗೂ ಪೆಟ್ಟಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಸಿ ಗಣೇಶ ನಗರದಲ್ಲಿ ಧನ್ಯ ರಘುಪತಿ ಹೆಗಡೆ (29) ಅವರು ವಾಸವಾಗಿದ್ದಾರೆ. ಫೆಬ್ರವರಿ ೧೫ರಂದು ಅವರು ಕುಂದಾಪುರದಿಂದ (Kundapur) ಹೊನ್ನಾವರ (Honnavar) ಕಡೆ ಹೊರಟಿದ್ದರು. ರಾಷ್ಟಿಯ ಹೆದ್ದಾರಿಯಲ್ಲಿ (National Highway) ವೇಗವಾಗಿ ಕಾರು ಓಡಿಸಿಕೊಂಡು ಬಂದ ಅವರು ಸಂಜೆ ೭.೨೦ರ ವೇಳೆಗೆ ಅವರು ಭಟ್ಕಳ (Bhatkal)ತಲುಪಿದ್ದರು.

Mankal Vaidya/ ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಸಚಿವ ಮಂಕಾಳ ವೈದ್ಯ

ಇದೇ ವೇಳೆ ಭಟ್ಕಳ ಪುರವರ್ಗದ ಚರ್ಚ ಎದುರು ಎಸೈ ಅಂತೋನ್ ಫರ್ನಾಂಡಿಸ್ ಅವರು ಬೈಕಿನಲ್ಲಿ ತಮ್ಮ ಪತ್ನಿ ಜೋಸ್ಟಿನ್ ಫರ್ನಾಂಡಿಸ್ ಜೊತೆ ಹೊರಟಿದ್ದರು. ಅಂತೋನ್ ಫರ್ನಾಂಡಿಸ್ ಅವರು ತಮ್ಮ ಬೈಕಿಗೆ ಇಂಡಿಕೇಟರ್ ಹಾಕಿ ಹೆದ್ದಾರಿಯಲ್ಲಿ ತಿರುಗುವ ಪ್ರಯತ್ನ ಮಾಡಿದ್ದರು. ಅದೇ ವೇಳೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಧನ್ಯ ಹೆಗಡೆ ಅವರು ಅಂತೋನ್ ಫರ್ನಾಂಡಿಸ್ ಅವರ ಬೈಕಿಗೆ ಗುದ್ದಿದರು.

Maha Shivaratri/ ಮುರ್ಡೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ವೈಭವ

ಕಾರು ಗುದ್ದಿದ ರಭಸಕ್ಕೆ ಅಂತೋನ್ ಫರ್ನಾಂಡಿಸ್ ಅವರ ಜೊತೆ ಜೋಸ್ಟಿನ್ ಫರ್ನಾಂಡಿಸ್ ಅವರು ಸಹ ನೆಲಕ್ಕೆ ಬಿದ್ದರು. ಆ ಅಪಘಾತದಲ್ಲಿ ಅಂತೋನ್ ಫರ್ನಾಂಡಿಸ್ ಅವರ ಕಾಲು, ಕೈ, ಹಣೆಗೆ ಗಾಯವಾಯಿತು. ಜೋಸ್ಟಿನ್ ಫರ್ನಾಂಡಿಸ್ ಅವರ ತಲೆಗೆ ಪೆಟ್ಟು ಬಿದ್ದಿತು. ನ್ಯೂಸ್ ಪೆಪರ್ ಏಜೆಂಟ್ ಫ್ರಾನ್ಸಿಸ್ ಡಿಸೋಜಾ ಅವರು ಈ ಅಪಘಾತದ ಬಗ್ಗೆ ಶಹರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ವೇಗವಾಗಿ ಕಾರು ಓಡಿಸಿದ ಧನ್ಯ ಹೆಗಡೆ ಅವರ ವಿರುದ್ಧ ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Padayatre / ಮುರುಡೇಶ್ವರ ದೇವಸ್ಥಾನಕ್ಕೆ ಭಟ್ಕಳ ತಹಶೀಲ್ದಾರರ ಪಾದಯಾತ್ರೆ