ಭಟ್ಕಳ (Bhatkal) : ಬೆಣಂದೂರು ಕಡೆಯಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಕಾರು ರಸ್ತೆಗೆ ಅಡ್ಡ ಬಂದ ಹಂದಿಯನ್ನು ತಪ್ಪಿಸಲು ಹೋಗಿ ಮೋರಿಗೆ ಡಿಕ್ಕಿ ಹೊಡೆದ (Car crash) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ (Udupi) ಮಣಿಪಾಲ ಆಸ್ಪತ್ರೆಯಿಂದ (Manipal hospital) ಭಟ್ಕಳದ ಬೆಣಂದೂರಿಗೆ ಕುಟುಂಬವೊಂದರ ಸದಸ್ಯರನ್ನು ಬಿಟ್ಟು ವಾಪಸ್‌ ಮರಳುತ್ತಿದ್ದಾಗ ಡಿ.೨೫ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಹೇರೂರು ಬಳಿ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಂದಿ ಅಡ್ಡಬಂದಿದ್ದರಿಂದ ಕಾರಿನ ವೇಗ ನಿಯಂತ್ರಿಸಲಾಗದೆ ರಸ್ತೆಯ ಎಡಬದಿಯಲ್ಲಿದ್ದ ಮೋರಿಗೆ ಡಿಕ್ಕಿ ಹೊಡೆದಿದೆ (Car crash). ಪರಿಣಾಮ ಕಾರು ಪಲ್ಟಿ ಹೊಡೆದಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ಸುಮಾರು ೧೦ ನಿಮಿಷಗಳ ಕಾಲ ಚಾಲಕ ಕಾರಿನಲ್ಲಿ ಸಿಲುಕಿಕೊಂಡಿದ್ದರು. ಕೆಲ ಹೊತ್ತಿನ ನಂತರ ಅದೇ ದಾರಿಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಯುವಕರು ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ : ಟ್ಯಾಕ್ಸಿಗೆ ಬೈಕ್‌ ಡಿಕ್ಕಿ; ಗಾಯಾಳು ವಿರುದ್ಧ ದೂರು

ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ನಡೆದಿದೆ ಎಂದು ಕಾರು ಚಾಲಕ ಮಣಿಪಾಲದ (Manipal) ಬಡಗಬೆಟ್ಟು ನಿವಾಸಿ ಮಹ್ಮದ್‌ ಸಮೀರ್‌ (೪೬) ವಿರುದ್ಧ ಸಹೋದರ ಮಹ್ಮದ್‌ ಸಲೀಂ (೪೪) ದೂರು (complaint) ದಾಖಲಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered). ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.