ಭಟ್ಕಳ: ವ್ಯಕ್ತಿಯೋರ್ವ ಮೋಸದಿಂದ ಬ್ಯಾಂಕಿನ ದಾಖಲೆಗಳನ್ನು ಪಡೆದು ಧಾರವಾಡದ (Dharwad) ಹೈಕೋರ್ಟಿಗೆ (High court) ಸಲ್ಲಿಸಿರುವ ಬಗ್ಗೆ ಮಹಿಳೆಯೊಬ್ಬಳು ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಗರದ ಬಂದರ ರಸ್ತೆಯಲ್ಲಿರುವ ಮಸ್ಕತ್ ಕಾಲೋನಿಯ ೧ನೇ ಕ್ರಾಸ್ ನಿವಾಸಿ ಸಮೀರಾ ತಂದೆ ಅಬ್ದುಲ್ಲಾ ಮೊಹತೆಶಾಮ್ ವಂಚನೆಗೆ ಒಳಗಾದವರು. ಫಿರ್ದೋಸ್ ನಗರದ ಇಶಾಕ್ ದಾವೂದ್ ಕಾಲೋ (೫೫) ವಿರುದ್ಧ ದೂರು ದಾಖಲಿಸಲಾಗಿದೆ (Case filed).

Follow up/ ಮರಕ್ಕೆ ಡಿಕ್ಕಿ ಹೊಡೆದಿದ್ದೇ ವಾಹನ ಪಲ್ಟಿಗೆ ಕಾರಣ

ಆರೋಪಿಯು ಕಳೆದ ವರ್ಷ ಜೂ ೧೮ರಂದು ಸಮೀರಾ ಅವರ ಬ್ಯಾಂಕ್ ಖಾತೆಯ ದಾಖಲೆಗಳನ್ನು ಪಡೆಯಲು ಅವರ ಹೆಸರಿನಲ್ಲಿ ಒಬ್ಬ ಮಹಿಳೆಯನ್ನು ಎಸ್ಬಿಐ ಭಟ್ಕಳ ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸಮೀರಾ ಅವರ ಸೃಷ್ಟಿತ ಸಹಿಯೊಂದಿಗೆ ಬ್ಯಾಂಕಿಗೆ ಕರೆದುಕೊಂಡು ಹೋದ ಮಹಿಳೆಯ ಹತ್ತಿರ ನಕಲಿ ದಾಖಲೆಗಳನ್ನು ಕೊಡಿಸಿ ಬ್ಯಾಂಕ್ ಖಾತೆಯ ದಾಖಲೆಗಳನ್ನು ಮೋಸದಿಂದ ಪಡೆದಯಾಗಿದೆ. ಆ ದಾಖಲೆಗಳನ್ನು ಧಾರವಾಡದ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಅರ್ಜಿಯೊಂದಿಗೆ ಸಲ್ಲಿಸಲಾಗಿದೆ ಎಂದು ಸಮೀರಾ ದೂರಿದ್ದಾರೆ.

arrested/ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್ ಹಾಕಿದ ಭಟ್ಕಳದ ವ್ಯಕ್ತಿ ಬಂಧನ