ಭಟ್ಕಳ: ಅರಣ್ಯ ಇಲಾಖೆಗೆ (forest department) ಸೇರಿದ, ಮಗ್ದೂಮ್ ಕಾಲೋನಿಯ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ಮೂಳೆಗಳು (Cattle bones), ಅಸ್ಥಿಪಂಜರಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೇ ಸದ್ಯ ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಾರೋ ಆರೋಪಿತರು ಭಟ್ಕಳದ ಮುಗ್ಗುಂ ಕಾಲೋನಿ ಗುಡ್ಡದಲ್ಲಿನ ಬೆಳ್ನಿ ಫಾರೆಸ್ಟ್ ಸರ್ವೆ ನಂ 74ರ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಜಾನುವಾರುಗಳನ್ನು ಎಲ್ಲಿಯೋ ಕಟಾವು ಮಾಡಿ ಅದರ ಉಳಿದ ಚರ್ಮ, ಎಲುಬು (Cattle bones) ಹಾಗೂ ಇತರೆ ಬಿಡಿ ಭಾಗಗಳನ್ನು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬಿಸಾಡಿದ್ದಾರೆ. ಇದರಲ್ಲಿ ಅರಣ್ಯೇತರ ಅಪರಾಧಗಳು ಕಂಡು ಬಂದಲ್ಲಿ ಮುಂದಿನ ಕಾನೂನು ಕ್ರಮಕೈಗೊಳ್ಳುವ ಕುರಿತು ಹಾಗೂ ಈ ರೀತಿ ಕೃತ್ಯ ಮಾಡಿದವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಭಟ್ಕಳ (Bhatkal) ಉಪ-ವಲಯ ಅರಣ್ಯಾಧಿಕಾರಿ ಮಾರುತಿ ಗಣಪತಿ ಸೊರಗಾಂವಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).
ಇದನ್ನು ಓದಿ: Honour/ ಭಟ್ಕಳದ ಸಾಧಕರಿಗೆ ಹೊನ್ನಾವರದಲ್ಲಿ ಸನ್ಮಾನ
ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಸಾಮಾಜಿಕ ಜಾಲತಾಣಗಳಲ್ಲಿ ಈ ಭಾಗದಲ್ಲಿ ಜಾನುವಾರು ಹತ್ಯೆ ನಡೆಯುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ರಾಶಿ ರಾಶಿ ಜಾನುರಾರುಗಳ ಅವಶೇಷಗಳು ಇರುವ ವಿಡಿಯೋಗಳು ವೈರಲ್ ಆಗಿದ್ದವು. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಇದನ್ನು ಓದಿ: Municipal Council/ ನಗರಸಭೆಗೆ ಇನ್ನಷ್ಟು ಗ್ರಾ ಪಂ ಸೇರಿಸಲು ಅಭ್ಯಂತರವಿಲ್ಲ: ಮಂಕಾಳ ಎಸ್ ವೈದ್ಯ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (video viral) ಆಗುತ್ತಿದ್ದಂತೆ ಹಿಂದೂ ಸಂಘಟನೆಯ ಕೆಲವರು ಆ ಭಾಗಕ್ಕೆ ಹೋದ ವೇಳೆಯಲ್ಲಿ ಅಲ್ಲಲ್ಲಿ ಕೆಲ ಭಾಗದಲ್ಲಿ ಜಾನುವಾರುಗಳ ಮೂಳೆಗಳು ಬಿದ್ದಿದ್ದು ಕಂಡು ಬಂದಿದೆ. ಅಲ್ಲೇ ಪಕ್ಕದಲ್ಲಿರುವ ದೊಡ್ಡ ತೊಟ್ಟಿಯಲ್ಲಿ ಜಾನುವಾರುಗಳ ಅವಶೇಷ ಇರುವ ಜಿಪಿಎಸ್ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಮಾಡಲಾಗಿದೆ.
ಇದನ್ನು ಓದಿ: KDP meeting/ ‘ಕಂದಾಯ ಇಲಾಖೆಯವರೇ ಏಜೆಂಟರನ್ನು ಮಾಡುತ್ತಿದ್ದಾರೆ’
ಈ ಬಗ್ಗೆ ವಿಷಯ ತಿಳಿದು ಗುರುವಾರ ಸಂಜೆ ಡಿವೈಎಸ್ಪಿ ಮಹೇಶ ಎಂ ಕೆ, ಸಿಪಿಐ ದಿವಾಕರ ಪಿ ಎಮ್, ಪಿಎಸ್‌ಐ ನವೀನ ಎಸ್ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಭಟ್ಕಳ ಉಪ-ವಲಯ ಅರಣ್ಯಾಧಿಕಾರಿ ಮಾರುತಿ, ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಸಭೆ ಜೆಸಿಬಿ ಮೂಲಕ ತೊಟ್ಟಿ ಖುಲ್ಲಾ ಪಡಿಸಿ ಅಲ್ಲಿದ್ದ ಜಾನುವಾರುವಿನ ಮೂಳೆಗಳನ್ನು ಸ್ವಚಗೊಳಿಸಲಾಗಿದೆ.
ಇದನ್ನು ಓದಿ: Complaint filed/ ಇನ್ಸ್ಟಾಗ್ರಾಮ್ ಖಾತೆದಾರನ ವಿರುದ್ಧ ದೂರು ದಾಖಲು
ಇಷ್ಟು ಪ್ರಮಾಣದಲ್ಲಿ ಗೋಹತ್ಯೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಎಲ್ಲವೂ ಮುಚ್ಚಿಹೋಗುತ್ತಿದೆ” ಎಂದು ಹಿಂದೂ ಸಂಘಟನೆಯ ಜಯಂತ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: Fish market controversy/ ವ್ಯಾಪಾರಿಗಳ ಬದುಕಿಗೆ ಕುತ್ತು ತಂದ ಮೀನು ಮಾರುಕಟ್ಟೆ ವಿವಾದ
ಪಶ್ಚಿಮಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ “ಅರಣ್ಯ ಇಲಾಖೆಯ ಪ್ರದೇಶದಲ್ಲಿ ಮೂಳೆಗಳು ಪತ್ತೆಯಾದರೂ ಕ್ರಮಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ. ತ್ಯಾಜ್ಯ ಬಾವಿ ಸೇರಿ ಜಲಮೂಲ ಕಲುಷಿತಗೊಳ್ಳುತ್ತಿದೆ. ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವರು ಗೊಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿ: Cremation/ ಭಿಕ್ಷುಕನ ಮೃತದೇಹದ ಅಂತ್ಯಸಂಸ್ಕಾರ



