ಭಟ್ಕಳ (Bhatkal): ಮನೆಯೊಳಗೆ ನುಗ್ಗಿ ಮಲಗಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲು ಯತ್ನಿಸಿದ (Chain snatching attempt) ವ್ಯಕ್ತಿಯನ್ನು ಮನೆಯವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬದ್ರಿಯಾ ಕಾಲೋನಿ ಟಗ್ಗರಗೋಡ ನಿವಾಸಿ ಫೌಜಾನ್ ಅಹಮ್ದದ್ ತಂದೆ ಮುಸ್ತಾಕ್ ಅಹಮದ್ (೨೦) ಬಂಧಿತ ಆರೋಪಿ. ಈತ ಹಾಲಿ ಕುಂದಾಪುರ (Kundapur) ತಾಲೂಕಿನ ಮಾವಿನಕಟ್ಟೆಯಲ್ಲಿ ವಾಸಿಸುತ್ತಿದ್ದ. ಜೂನ್ ೨೭ರಂದು ರಾತ್ರಿ ೨ ಗಂಟೆಗೆ ನಗರದ ಮೀನಾ ರೋಡಿನಲ್ಲಿರುವ ಆಕೀಫ್ ತಂದೆ ಮೊಹಮ್ಮದ ಅಬ್ದುಲ್ ಅಜೀಮ್ ಬುಡನ್ ಬಾಶಾ ಎಂಬುವರ ಮನೆಯ ಒಳ ನುಗ್ಗಿದ್ದ. ಮನೆಯಲ್ಲಿ ಮಲಗಿರುವ ಆಕೀಫ್ ಅವರ ತಾಯಿಯವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಸುಲಿಗೆ ಮಾಡಲು ಯತ್ನಿಸಿದಾಗ (Chain snatching attempt) ಮನೆಯಲ್ಲಿದ್ದವರು ಕೂಡಿಕೊಂಡು ಆರೋಪಿಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ಇದನ್ನು ಓದಿ: Young man arrested/ ಮುರುಡೇಶ್ವರದಲ್ಲಿ ಅಳ್ವೆಕೋಡಿ ಯುವಕ ವಶಕ್ಕೆ