ಭಟ್ಕಳ : ತಾಲೂಕಿನ ಕರಿಕಲ್ ಧ್ಯಾನ ಕುಟೀರದಲ್ಲಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕೈಗೊಂಡ ಚಾತುರ್ಮಾಸ್ಯ(Chathurmasya 8th day) ವೃತಾಚರಣೆಯ ಎಂಟನೇ ದಿನದ ಕಾರ್ಯಕ್ರಮ ರವಿವಾರ ಅತ್ಯಂತ ಸಾಂಗವಾಗಿ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಗಮಿಸಿ ಶ್ರೀ ಗುರುಗಳ ಆಶಿರ್ವಾದ ಪಡೆದುಕೊಂಡರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾರ್ಯಕ್ರಮದಲ್ಲಿ ನೆರೆದ ಸಾವಿರಾರು ಭಕ್ತರಿಗೆ ಶ್ರೀ ಗುರುಗಳು ಆಶಿರ್ವಚನ ನೀಡಿದರು. ಚಾತುರ್ಮಾಸ್ಯ(Chathurmasya 8th day) ವ್ರತಾಚರಣೆ ಸಂದರ್ಭದಲ್ಲಿ ಆ ಭಗವಂತನು ವ್ರತಾಚರಣೆ ನಡೆಯುವ ಜಾಗದಲ್ಲಿ ಸಂಚರಿಸುತ್ತಿರುತ್ತಾನೆ. ಆ ಮೂಲಕ ಸಾನಿಧ್ಯದ ಸಂಪರ್ಕದಲ್ಲಿರುವ ಎಲ್ಲಾ ಭಕ್ತಾದಿಗಳು ಶ್ರೀದೇವರ ಕೃಪೆಗೆ ಒಳಗಾಗುತ್ತಾರೆ. ಆಧ್ಯಾತ್ಮ, ಧ್ಯಾನದಿಂದ ಬದುಕಿನ ಅರ್ಥ ಕಂಡುಕೊಳ್ಳಬಹುದು. ಚಾತುರ್ಮಾಸ ಕೇವಲ ಗುರುಗಳಿಗಷ್ಟೇ ಸೀಮಿತವಲ್ಲ, ಗೃಹಸ್ಥರು ಕೂಡ ಚಾತುರ್ಮಾಸ್ಯ ವೃತವನ್ನು ಕೈಗೊಂಡು ಆತ್ಮೋನ್ನತಿಯನ್ನು ಕಂಡುಕೊಳ್ಳಬಹುದು. ಯೋಗಿ ಪರಂಪರೆ ಎಂದರೆ ಅದು ಜಾತಿ ವ್ಯವಸ್ಥೆಯನ್ನು ಮೀರಿ ನಿಲ್ಲುವ ಪರಂಪರೆ. ಶ್ರೀ ರಾಮನು ಕೂಡ ಶಬರಿ ಭಕ್ತಿಪೂರ್ಣವಾಗಿ ಕಚ್ಚಿ ನೋಡಿದ ಹಣ್ಣುಗಳನ್ನು ತಿಂದು ಜಾತಿ, ಪಂಥಗಳನ್ನು ಮೀರಿ ನಿಂತಿದ್ದ ಎಂದರು.
ಇದನ್ನೂ ಓದಿ : ಮಳೆಹಾನಿ ಪ್ರದೇಶಗಳಿಗೆ ಸಚಿವ ಭೇಟಿ
ಧ್ಯಾನ ಮಂದಿರದಲ್ಲಿ ಜುಲೈ ೨೧ರಿಂದ ಶ್ರೀ ಗುರುಗಳು ಚಾತುರ್ಮಾಸ್ಯ ವೃತಾಚರಣೆಯನ್ನು ಕೈಗೊಂಡಿದ್ದಾರೆ. ಒಟ್ಟು ೪೧ ದಿನಗಳ ಕಾಲ ನಡೆಯುವ ಕಾರ್ಯಕ್ರದಲ್ಲಿ ಅನುದಿನವೂ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ, ಶ್ರೀ ಗುರುಗಳಿಗೆ ಪಾದಪೂಜೆ ಸೇವೆ, ಧರ್ಮ ಜಾಗೃತಿಯ ಅಂಗವಾಗಿ ಯಕ್ಷಗಾನ, ಪ್ರವಚನ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಭಕ್ತರು ಸಾಗರೋಪಾದಿಯಲ್ಲಿ ಪ್ರತಿನಿತ್ಯ ಹರಿದು ಬರುತ್ತಿದ್ದು ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.
ಇದನ್ನೂ ಓದಿ : ಗುಡ್ಡ ಕುಸಿತ: ಬ್ಯಾರಿಕೇಡ್ ಹಾಕಿ ಸುಮ್ಮನಾದ ಅಧಿಕಾರಿಗಳು