ಭಟ್ಕಳ : ತಾಲೂಕಿನ‌ ಶಿರಾಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ (Chitrapura Swamiji) ಅವರ ೨೮ನೇ ವರ್ಷದ ಚಾತುರ್ಮಾಸ್ಯ ವ್ರತದ ಆಚರಣೆಯು ಆರಂಭಗೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈ ಬಾರಿ ಮಂಗಳೂರು (Mangaluru) ರಥಬೀದಿ ಬಳಿ ಇರುವ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಚಿತ್ರಾಪುರ ಶ್ರೀಗಳ (Chitrapura Swamiji) ಚಾತುರ್ಮಾಸ್ಯ (Chathurmasya) ಪ್ರಾರಂಭಗೊಂಡಿತು. ಪ್ರಾತಃ ಕಾಲ ಶ್ರೀ ಉಮಾ ಮಹೇಶ್ವರ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.

ವಿಡಿಯೋ ಸಹಿತ ಇದನ್ನೂ ಓದಿ : ಭಗವಂತನಲ್ಲಿ ಶರಣಾಗತಿಯಿಂದ ಮಾತ್ರ ಸಾಕ್ಷಾತ್ಕಾರ

ಶ್ರೀಗಳವರು ಶ್ರೀ ದೇವರ ಪೂಜೆ ಪುರಸ್ಕಾರಗಳನ್ನು ತಮ್ಮ ದಿವ್ಯ ಹಸ್ತಗಳಿಂದ ನೆರವೇರಿಸಿದರು. ಬಳಿಕ ಶ್ರೀಗಳವರಿಂದ ಮಂಡಲ ಪೂಜೆ, ವ್ಯಾಸ/ಗುರು ಪೂರ್ಣಿಮೆ(guru poornima) ಪರ್ವ ದಿನದಂದು ಪೂಜೆ ನಡೆದು ಶ್ರೀಗಳವರು ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡಿದರು.

ವಿಡಿಯೋ ಸಹಿತ ಇದನ್ನೂ ಓದಿ : ಗುಡ್ಡಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಈ ಸಂದರ್ಭದಲ್ಲಿ ಚಾತುರ್ಮಾಸ್ಯ ಸಮಿತಿಯ ಎಲ್ಲೋರ್ ರಾಮ್ ಕಿಶೋರ ರಾವ್, ಭವಾನಿ ಶಂಕರ ಕಂಡಲೂರ್, ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.