ಭಟ್ಕಳ (Bhatkal) : ಬೈಕುಗಳ ನಡುವೆ ಡಿಕ್ಕಿ (Collision ) ಸಂಭವಿಸಿ ಮಹಿಳೆಯೋರ್ವಳು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಹಡೀಲ್ ಸಬ್ಬತ್ತಿಯ ನೀಲಾವತಿ ಮೋಹನ ನಾಯ್ಕ (೪೮) ಗಾಯಗೊಂಡವರು. ತಾಲೂಕಿನ ಸಾಗರ (Sagar) ರಸ್ತೆಯ ಕಸಲಗದ್ದೆ ಕ್ರಾಸ್ ಹತ್ತಿರ ಅಪಘಾತ ನಡೆದಿತ್ತು. ಗಾಯಾಳು ನೀಲಾವತಿ ತಮ್ಮ ಗಂಡ ವಾಕರಸಾ ಸಂಸ್ಥೆಯ ಚಾಲಕ ಮೋಹನ ನಾಯ್ಕರ ಬೈಕಿನಲ್ಲಿ ಸಾಗರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ (Collision). ಡಿಕ್ಕಿ ಹೊಡೆದ ಬೈಕ್ ಸವಾರ ರಾಮಾ ಮಾಸ್ತಿ ಗೊಂಡ (೫೫) ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಲಾಗಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಚಳಿಗಾಲ ಬಂತು; ತಾಪಮಾನ ಇಳಿಕೆ