ಭಟ್ಕಳ (Bhatkal) : ಡಿವೈಡರ್ ಗೆ ಹತ್ತಿದ ಇನ್ನೋವಾ ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು (collision of cars) ಆ ಕಾರಿನಲ್ಲಿದವರು ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ಸೋಮವಾರ ಸಂಜೆ ತಾಲೂಕಿನ ಬೆಳಕೆ ಸೊಸೈಟಿ ಬಳಿ ಈ ಘಟನೆ‌ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಡುಪಿ (Udupi) ಕಡೆಯಿಂದ ಭಟ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗುರುಕತೆಯಿಂದ ಬಂದ ಇನ್ನೋವಾ (Innova) ಕಾರು ಡಿವೈಡರ್ ಮೇಲೆ ಹತ್ತಿದೆ. ಎದುರಿನ ಪಥದಲ್ಲಿ ಭಟ್ಕಳ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ (collision of cars). ಆ ಕಾರಿನ ಚಾಲಕ ಗೋವಿಂದ ರಾಯ್ ಗೋಪಾಲ‌ ಮಲ್ಯ (೫೪) ಎಡಕೈಗೆ ಗಾಯವಾಗಿದೆ. ಉಡುಪಿ ತಾಲೂಕಿನ ಹಿರಿಯಡ್ಕದ ಗುಡ್ಡೇಅಂಗಡಿ ವಾಸಿಯಾಗಿರುವ ಇವರು ಕುಟುಂಬ ಸಹಿತ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದರು‌. ಕಾರಿನಲ್ಲಿದ್ದ ಹೆಂಡತಿ ಮತ್ತು ಮಗಳ ಹಣೆಗೆ ಗಾಯವಾಗಿದೆ. ಅತ್ತೆ ಮಾಲತಿ ಪೈ ಮತ್ತು ಅಕ್ಕ ರೂಪಾ‌ ಕಾಮತ ಅವರಿಗೂ ಗಾಯವಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ :  ಪೊಲೀಸರಿಂದ ಗಣೇಶೋತ್ಸವ

ಗಾಯಾಳು ಗೋವಿಂದರಾಯ್ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case registered). ಇನ್ನೋವಾ ಕಾರಿನ ಚಾಲಕ ಹುಬ್ಬಳ್ಳಿಯ (hubballi) ಭೈರಿದೇವರಕೊಪ್ಪದ ನಿವಾಸಿ, ಮಂಜುನಾಥ ಬಸವಂತಪ್ಪ ಹೆರೂರು(೩೫) ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Raghaveshwar Sri/ ಜ್ಯೋತಿಷ್ಯ ಅರ್ಥ ಮಾಡಿಕೊಳ್ಳದಿರುವುದು ನಮ್ಮ ದೌರ್ಭಾಗ್ಯ