ಭಟ್ಕಳ (Bhatkal) : ತಾಲೂಕಿನ ಮಣ್ಣುಳಿ ರಾಷ್ಟ್ರೀಯ ಹೆದ್ದಾರಿ (National Highway) ಪಕ್ಕದಲ್ಲಿರುವ ಗರಡಿಮನೆ ನಾಗಬನದಲ್ಲಿ ಅತ್ಯಂತ ವಿಜೃಂಭಣೆಯಿಂದ ಊರಿನ ಭಕ್ತರ ಸಮ್ಮುಖದಲ್ಲಿ ದೀಪೋತ್ಸವ (Deepotsava) ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೀಪೋತ್ಸವ (Deepotsava) ನಿಮಿತ್ತ ಭಟ್ಕಳ ತಾಲೂಕಿನ ಪ್ರಸಿದ್ಧ ಭಜನಾ ತಂಡದಿಂದ ಭಜನಾ ಕುಣಿ ನಡೆಯಿತು. ಬಳಿಕ ರಾತ್ರಿ ೮ ಗಂಟೆಗೆ ಹೌದರಾಯನ ಕುಣಿತ (ಹರಿಸೇವಾ ಕುಣಿತ) ನಡೆಯಿತು. ೯ ಗಂಟೆಗೆ ಮಹಾಪೂಜೆ ನಂತರ ಪ್ರಸಾದ ಮತ್ತು ಉಪಹಾರ ವಿತರಣೆ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಗರಡಿಮನೆ ಮೂಲ ನಾಗದೇವರಿಗೆ ಬೆಳ್ಳಿಯ ಮುಖವಾಡವನ್ನು ಸಮರ್ಪಣೆ ಮಾಡಲಾಯಿತು. ಈ ವೇಳೆ ನೂರಾರು ಭಕ್ತರು ಆಗಮಿಸಿ ಪೂಜೆ ಮತ್ತು ಸಾಂಪ್ರದಾಯಕ ನೃತ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು. ನಂತರ ಭಜನಾ ಕುಣಿತ ಹಾಗೂ ಹೌದರಾಯನ ಕುಣಿತ (houdarayana kunita) ತಂಡವನ್ನು ಕಮಿಟಿಯಿಂದ ಸನ್ಮಾನಿಸಲಾಯಿತು.

ಇದನ್ನೂ ಓದಿ : ಭಟ್ಕಳದ ವ್ಯಕ್ತಿ ನಾಪತ್ತೆ

ಈ ಬಾರಿಯ ಭಜನಾ ಸೇವೆಯನ್ನು ತಿರುಮಲ ವೆಂಕಟ್ರಮಣ ನಾಯ್ಕ ಕಸಲಗದ್ದೆಮನೆ, ಹೌದರಾಯನ ಕುಣಿತ (ಹರಿಸೇವಾ ಕುಣಿತ) ಸೇವೆಯನ್ನು
ನಾಗರಾಜ ಶನಿಯಾರ ನಾಯ್ಕ ಕೋಣೆಮನೆ ಹಾಗೂ ಪ್ರಸಾದ ಮತ್ತು ಉಪಹಾರ ಸೇವೆಯನ್ನು ಗುರುಕೃಪಾ ಕೋ-ಆಪರೇಟಿವ್‌ ಸೊಸೈಟಿ ಮಣ್ಣುಳಿ ಇವರಿಂದ ನೀಡಲಾಗಿತ್ತು. ಈ ಸಂದರ್ಭದಲ್ಲಿ ಗರಡಿಮನೆ ನಾಗಬನ ಟ್ರಸ್ಟ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಮಿತ್ರ ಯುವಕ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ :  ಕೆಲಸ ಮಾಡುತ್ತಿದ್ದ ಲಾಡ್ಜ್ ನಲ್ಲೇ ಯುವಕ ನೇಣಿಗೆ ಶರಣು