ಭಟ್ಕಳ: ಚಾತುರ್ಮಾಸ್ಯ ಕಾರ್ಯಕ್ರಮ (chaturmasya) ನಿಮಿತ್ತ ಶನಿವಾರ ಸಂಜೆ ಭಟ್ಕಳ (Bhatkal) ತಾಲೂಕಿನ ಶಿರಾಲಿಯ ಚಿತ್ರಾಪುರ ಮಠದಲ್ಲಿ (chitrapur math) ಉಮೇಶ ಮುಂಡಳ್ಳಿ ಅವರ ನಿನಾದ ತಂಡದಿಂದ ಭಕ್ತಿ ಸಂಗೀತ (devotional music) ಕಾರ್ಯಕ್ರಮ ‌ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗುರುಪೂರ್ಣಿಮೆ (Guru Purnima) ದಿನದಿಂದ ಚಿತ್ರಾಪುರ ಮಠದಲ್ಲಿ ಸದ್ಯೋಜ್ಜಾತ ಶಂಕರಾಶ್ರಮ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತಿದ್ದು, ಧಾರ್ಮಿಕ ಪೂಜಾ ಕಾರ್ಯಕ್ರಮ ಜತೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಿಮಿತ್ತ ಶನಿವಾರ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರಿಂದ ಭಕ್ತಿ ಸಂಗೀತ (devotional music) ಕಾರ್ಯಕ್ರಮ ಎರಡು ಗಂಟೆಗಳ ಕಾಲ ನಡೆಯಿತು. ನಂತರ ನಡೆದ ಪೂರ್ವಾಂಗ ಮತ್ತು ಅಷ್ಟಾವಧಾನದಲ್ಲಿಯೂ ಉಮೇಶ ಮುಂಡಳ್ಳಿ ತಮ್ಮ ಗಾಯನ ಪ್ರಸ್ತುತಪಡಿಸಿದರು.

ಇದನ್ನು ಓದಿ: Snakes/ ಕಾಡಿನಿಂದ ಮನೆಗಳತ್ತ ಹಾವುಗಳು

ಸಹ ಗಾಯನದಲ್ಲಿ ನಿನಾದ ಉಮೇಶ ಇದ್ದರು. ಹಾರ್ಮೋನಿಯಂನಲ್ಲಿ ಹಸ್ತಾನಂದ ಉಜಿರೆ, ತಬಲದಲ್ಲಿ ತೃಯಂಬಕ ಹಾಗೂ ಸಂಸ್ಕೃತ್ ಸಹಕರಿಸಿದರು. ಶ್ರೀ ಚಿತ್ರಾಪುರ ಮಠದ ವತಿಯಿಂದ ಗಣೇಶ ಬಂಕೇಶ್ವರ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು.

ಇದನ್ನು ಓದಿ: Sharabi river? ಶರಾಬಿ ನದಿ ಶುದ್ಧಗೊಳ್ಳುತ್ತಾ??