ಭಟ್ಕಳ (Bhatkal) : ಕುಟುಂಬ ಸಮೇತ ಮುರ್ಡೇಶ್ವರ ಲಾಡ್ಜ್ನಲ್ಲಿ (Murdeshwar Lodge) ತಂಗಿದ್ದ ಮಹಿಳೆಯ ತಾಳಿ ಸರ ಮತ್ತು ನಗದು ಕಳುವಾಗಿರುವ (gold theft) ಘಟನೆ ನಿನ್ನೆ ಶನಿವಾರ ನಡೆದಿದೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಧಾರವಾಡ (Dharwad) ಜಿಲ್ಲೆಯ ಕಲಘಟಗಿ (Kalaghatagi) ತಾಲೂಕಿನ ಲಿಂಗನಕೊಪ್ಪ ಗ್ರಾಮದ ಮಾಧುರಿ ಬಸವರಾಜ ನೇಸರಗಿ ಅವರ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ ತಾಳಿ ಸರ ಮತ್ತು ೫೦೦೦ ರೂ. ನಗದು ಕಳ್ಳತನವಾಗಿದೆ (gold theft). ಈ ಕುರಿತು ಅವರ ಗಂಡ ಲಿಂಗನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ನೇಸರಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ವಕ್ಫ್ ಕಾಯಿದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ
ಬಸವರಾಜ ನೇಸರಗಿ, ಅವರ ಹೆಂಡತಿ ಮಾಧುರಿ, ಅಕ್ಕ ಗಿರಿಜಾ ಹಾಗೂ ಮತ್ತೊಬ್ಬ ಅಕ್ಕನ ಮಗಳು ಧರ್ಮಸ್ಥಳ (Dharmasthala) ದೇವಸ್ಥಾನಕ್ಕೆಂದು ಸೆ.೧೩ರಂದು ಮಧ್ಯಾಹ್ನ ೩ರ ಸುಮಾರಿಗೆ ಗ್ರಾಪಂ ಸಿಬ್ಬಂದಿ ಮೈಲಾರಗೌಡ ಪಾಟೀಲ ಜೊತೆ ಕಾರಿನಲ್ಲಿ ಹೊರಟಿದ್ದರು. ರಾತ್ರಿ ೧೦.೧೫ಕ್ಕೆ ಮುರುಡೇಶ್ವರಕ್ಕೆ (Murudeshwar) ಬಂದು ಅಲ್ಲಿನ ಇಂದ್ರಪ್ರಸ್ಥ ಹೋಟೆಲ್ ಹತ್ತಿರದ ಮುರ್ಡೇಶ್ವರ ಹೆಸರಿನ ಲಾಡ್ಜ್ನಲ್ಲಿ ತಂಗಿದ್ದರು. ಓಂದು ಕೊಠಡಿಯಲ್ಲಿ ಮೈಲಾರಗೌಡ ಪಾಟೀಲ ತಂಗಿದ್ದರೆ, ಇನ್ನೊಂದು ಕೊಠಡಿಯಲ್ಲಿ ಉಳಿದವರು ಉಳಿದಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಗುರುಕೃಪಾ ಸೊಸೈಟಿಗೆ ೫೦ ಲಕ್ಷ ರೂ. ಲಾಭ
ಬಸವರಾಜ ಹೆಂಡತಿ ಮಾಧುರಿ, ರಾತ್ರಿ ಮಲಗುವಾಗ ಕೊರಳಲ್ಲಿ ಇದ್ದ ತಾಳಿ ಸರ ವೆನಿಟಿ ಬ್ಯಾಗ್ನಲ್ಲಿಟ್ಟು ಮಲಗಿದ್ದರು. ಆದರೆ ಮರುದಿನ ಬೆಳಿಗ್ಗೆ ೬ ಗಂಟೆಗೆ ಎದ್ದು ನೋಡಿದಾಗ ವೆನಿಟಿ ಬ್ಯಾಗ್ನಲ್ಲಿದ್ದ ೫೦೦೦ ರೂ. ನಗದು ಮತ್ತು ತಾಳಿ ಸರ ಇರಲಿಲ್ಲ. ೨.೨೦ ಲಕ್ಷ ರೂ. ಮೌಲ್ಯದ ತಾಳಿ ಸರ ಮತ್ತು ನಗದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಮಾಧುರಿ ಗಂಡ ಬಸವರಾಜ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ