ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಸಂಭವಿಸಿದ ಅಪಘಾತದಲ್ಲಿ ತಮಿಳುನಾಡಿನ (Tamil Nadu) ಕೃಷ್ಣಗಿರಿ ಮೂಲದ ವೆಟ್ಟಪ್ಪ (68) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ (seriously injured).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನವಾಯತ್ ಕಾಲೋನಿಯ ಅಬ್ದುಲ್ ಖಾದೀರ್ ಶೇಖ್ ಎಂಬಾತ ಅಲಿ ಪಬ್ಲಿಕ್ ಸ್ಕೂಲ್ ಬಸ್ ಅನ್ನು ತೆಂಗಿನಗುಂಡಿ ಕ್ರಾಸ್‌ನಿಂದ ಸರ್ಕಲ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ವೇಳೆ, ಕಾಮಾಕ್ಷಿ ಪೆಟ್ರೋಲ್ ಬಂಕ್ ಎದುರು ರಸ್ತೆ ದಾಟುತ್ತಿದ್ದ ವೃದ್ಧಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಲೆಗೆ ಮತ್ತು ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗೊಂಡ (seriously injured) ವೆಟ್ಟಪ್ಪ ಪ್ರಜ್ಞಾಹೀನರಾಗಿದ್ದು, ಸ್ಥಳೀಯರ ನೆರವಿನಿಂದ 108 ಆಂಬ್ಯುಲೆನ್ಸ್ (ambulance) ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: Young man collapsed/ ಕುಸಿದುಬಿದ್ದು ಮೃತಪಟ್ಟ ಯುವಕ

ಈ ಸಂಬಂಧ ಬಸ್ ಚಾಲಕ ಅಬ್ದುಲ ಖಾದಿರ ಶೇಖ್ ವಿರುದ್ಧ ಭಟ್ಕಳ (Bhatkal) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

ಇದನ್ನು ಓದಿ: Welcome/ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ