ಭಟ್ಕಳ: Death news/ ತಾಲೂಕಿನ ಮಾರುಕೇರಿಯ ಕೋಟಖಂಡ ಕಲ್ಲಬ್ಬೆಯ ಸಂಗೀತಗಾರ ನಾಗರಾಜ ವಾಸುದೇವ ಹೆಗಡೆ ಏಣಿಮನೆ (47) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮನೆಯಲ್ಲಿ ಮಂಚದಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು ತಗುಲಿದ್ದ ಅವರನ್ನು ತಕ್ಷಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ (Mangaluru) ವೆನಲಾಕ್ ಆಸ್ಪತ್ರೆಗೆ (Wenlock hospital) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಅವರು ಕೊನೆಯಿಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Case filed/ ಮದುವೆ ವಿರೋಧಿಸಿದ ತಾಯಿ ಮೇಲೆ ಮಗ, ಇತರರಿಂದ ಹಲ್ಲೆ
ಇವರು ಭಟ್ಕಳದಲ್ಲಿ (Bhatkal) ಹಂಸಧ್ವನಿ ಅಂಗಡಿ ತೆರೆದು ಹಾರ್ಮೊನಿಯಂ ರಿಪೇರಿ ಮತ್ತು ಸೌಂಡ್ ಸಿಸ್ಟಮ್ ಕೆಲ ಕಾಲ ನಡೆಸಿದ್ದರು. ಉತ್ತಮ ಸಂಗೀತಗಾರರೂ ಆಗಿದ್ದ ಅವರು ಹಲವರಿಗೆ ಸಂಗೀತಾಭ್ಯಾಸ ಮಾಡಿಸಿದ್ದರು. ಇವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. (Death news)



