ಭಟ್ಕಳ: ಆಗಸ್ಟ್ ೧೫ರಂದು ನಡೆದ ಭಟ್ಕಳ (Bhatkal) ಟ್ಯಾಕ್ಸಿ ಚಾಲಕ-ಮಾಲಕರ ಸಂಘದ (Taxi Association) ಮಹಾಸಭೆಯಲ್ಲಿ ೨೦೨೫-೨೦೨೬ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ಸಿಟಿ ಹಾಲ್‌ನಲ್ಲಿ ಮಹಾಸಭೆ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಘದ (Taxi Association) ಅಧ್ಯಕ್ಷರಾಗಿ ಗಣೇಶ ದೇವಡಿಗ, ಉಪಾಧ್ಯಕ್ಷರಾಗಿ ಮೊಹಮ್ಮದ್ ಮುಷ್ತಾಕ್, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಈರ ನಾಯ್ಕ, ಸಹ ಕಾರ್ಯದರ್ಶಿಯಾಗಿ ಮೊಹಮ್ಮದ್ ಅದ್ನಾನ್, ಖಜಾಂಚಿಯಾಗಿ ನಾರಾಯಣ ನಾಯ್ಕ ಮತ್ತು ಸಹ ಖಜಾಂಚಿಯಾಗಿ ಮೊಹಮ್ಮದ್ ಸಲ್ಮಾನ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ಫರಾಜ್ ಶಾಬಂದ್ರಿ, ಶ್ರೀನಿವಾಸ ಮಂಜಯ್ಯ ನಾಯ್ಕ, ಲೋಕೇಶ ನಾಯ್ಕ, ರಾಘವೇಂದ್ರ ಶೇಟ, ಅಬ್ದುಲ್ ಬಾರಿ, ದಿನೇಶ ಮೊಗೇರ, ಕಫೀಲ್ ಅಹ್ಮದ್ ಹಾಗೂ ತಲಹ ಜಬೀರ್ ವಜೀರ್ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: Mega job interview/ ಭಟ್ಕಳದಲ್ಲಿ ಮೆಗಾ ಉದ್ಯೋಗ ಸಂದರ್ಶನ



