ಭಟ್ಕಳ (Bhatkal): ತಾಲೂಕಿನ ಬೈಲೂರಿನ ಕೆಳಗಿನ ಶೇರುಗಾರ ಕೇರಿಯ ಸತೀಶ (46) ಎಂಬ ಕೃಷಿಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ (Farmer Dies) ಭಾನುವಾರ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮನೆಯ ಹತ್ತಿರದ ಬಾವಿ ಕಟ್ಟೆಯ ಮೇಲೆ ನಿಂತು ಬಾಳೆಗಿಡದ ಗೋಣೆಯನ್ನು ಕಡಿಯುತ್ತಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದ ಅವರು, ನೀರು ಕುಡಿದು ಮೃತಪಟ್ಟಿದ್ದಾರೆ (farmer dies). ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿ, ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಘಟನೆಯ ಕುರಿತು ಮೃತನ ತಮ್ಮ ಉಲ್ಲಾಸ ಮುರುಡೇಶ್ವರ (Murudeshwara) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ (case filed).
ಇದನ್ನೂ ಓದಿ: Kick Boxing/ ಬೆಂಗಳೂರಲ್ಲಿ ಭಟ್ಕಳದ ಮಕ್ಕಳ ಪದಕಗಳ ಬೇಟೆ, ರಾಷ್ಟ್ರಮಟಕ್ಕೆ ಆಯ್ಕೆ



