ಭಟ್ಕಳ: ಅತಿ ವೇಗ ಮತ್ತು ಅಜಾಗರೂಕತೆಯ ಕಾರು ಚಾಲನೆಯ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯ ಉಪನಿರೀಕ್ಷಕ ರನ್ನಗೌಡ ಪಾಟೀಲ ಎಫ್ಐಆರ್ ದಾಖಲಿಸಿದ್ದಾರೆ (FIR filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಹುರುಳಿಸಾಲ ಕಾರಗದ್ದೆ ನಿವಾಸಿ ಅಮೀತ್ ತಂದೆ ಸುರೇಶ ಶಿರಾಲಿಕರ (೩೩) ಕಾರು ಚಲಾಯಿಸುತ್ತಿದ್ದರು. ಇವರು ದಿನಾಂಕ: ೧೬-೦೧-೨೦೨೬ರಂದು ೧೭:೦೦ ಗಂಟೆಯ ಸುಮಾರಿಗೆ ತನ್ನ ಹುಂಡೈ ಕಂಪನಿಯ ಕ್ರೇಟಾ ಕಾರನ್ನು ಕಾರಗದ್ದೆ ೨ನೇ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ (National Highway) ಹೋಗುವ ಗುಡ್ ಲಕ್ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಪೊಲೀಸರು ತಡೆದಿದ್ದಾರೆ. ಕಾರು ನಿಲ್ಲಿಸಲು ಸೂಚಿಸಿದರೂ ಕೂಡಾ ಕಾರನ್ನು ನಿಲ್ಲಿಸದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿದ್ದು, ಮುಂದೆ ತಿರುವಿನಲ್ಲಿ ಪೊಲೀಸರು ವಾಹನವನ್ನು ತೆಡೆದು ನಿಲ್ಲಿಸಿ, ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ (FIR filed).

ಇದನ್ನು ಓದಿ: land dispute/ ಜಾಗ ವಿವಾದದ ಹಿನ್ನೆಲೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ