ಭಟ್ಕಳ (Bhatkal) : ಬೋಟಿನಿಂದಸಮುದ್ರದಲ್ಲಿ ಬಿದ್ದು ಮೀನುಗಾರ ಮೃತಪಟ್ಟ (Fisherman died) ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಾಲಿ ಭಟ್ಕಳ ತಾಲೂಕಿನ ತೆಂಗಿನಗುಂಡಿಯಲ್ಲಿ ವಾಸವಾಗಿದ್ದ ಪಂಕಜ ಜಗದೀಶ ಭಗತ (೨೦) ಮೃತ ದುರ್ದೈವಿ. ಇವರು ಮೂಲತಃ ಛತ್ತೀಸಗಡ ರಾಜ್ಯದ ಜಸ್ಪುರ ಜಿಲ್ಲೆಯ ಕಾನ್ಸಾಬೆಲ್‌ ತಾಲೂಕಿನ ಡೋಕ್ರಾದ ನಕ್ಟಿ ಮುಂಡಾದವರು. ಇವರು ಜ.೮ರಂದು ವೈಲಂಕಿನಿ ಎಂಬ ಹೆಸರಿನ ಬೋಟಿನಿಂದ ಬಿದ್ದು ಸಮುದ್ರ ಪಾಲಾಗಿದ್ದರು. ಊಟ ಮಾಡಿ ಕೈ ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಬೋಟಿನ ಮೇಲಿನಿಂದ ಸಮುದ್ರ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದರು (Fisherman died). ಮೃತದೇಹವು ಜ.೯ರಂದು ಬೆಳಿಗ್ಗೆ ೧೧.೩೦ರ ಸುಮಾರಿಗೆ ಸಿಕ್ಕಿದೆ.

ಇದನ್ನೂ ಓದಿ : ಪೊಲೀಸರ ಮೇಲೆ ದುಷ್ಕರ್ಮಿಗಳ ದಾಳಿ