ಭಟ್ಕಳ: ದೋಣಿ ದುರಂತದಲ್ಲಿ ಸಮುದ್ರ ಪಾಲಾಗಿದ್ದ ನಾಲ್ವರು ಮೀನುಗಾರರಲ್ಲಿ ಒಬ್ಬ ಶವವಾಗಿ ಪತ್ತೆಯಾಗಿದ್ದಾನೆ (Fisherman’s body found).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರಾಮಕೃಷ್ಣ ಮಂಜು ಮೊಗೇರ ಮೃತ ದುರ್ದೈವಿ. ಇವರ ಶವ ಹೊನ್ನೇಗದ್ದೆಯ ಸಮುದ್ರ ತೀರದಲ್ಲಿ (sea shore) ಪತ್ತೆಯಾಗಿದೆ (Fisherman’s body found).

ಇದನ್ನು ಓದಿ: fishermen missing/ ದೋಣಿ ಮುಳುಗಿ ನಾಲ್ವರು ಮೀನುಗಾರರು ನಾಪತ್ತೆ

ಭಟ್ಕಳದ (Bhatkal) ಅಳ್ವೆಕೋಡಿ ಬಂದರಿನಿಂದ ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ತೆರಳಿದ್ದ ‘ಮಹಾಸತಿ’ ಎಂಬ ಗಿಲ್ನಟ್ ದೋಣಿ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ದುರ್ಘಟನೆ ನಡೆದಿತ್ತು. ಘಟನೆಯ ವೇಳೆ ದೋಣಿಯಲ್ಲಿ ಇದ್ದ ಆರು ಜನರಲ್ಲಿ ನಾಲ್ವರು ಸಮುದ್ರ ಪಾಲಾಗಿದ್ದರು. ಇನ್ನು ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ತೊಡಗಿದ್ದಾರೆ.

ಇದನ್ನು ಓದಿ: Bike Accident/ ಬಸ್ತಿಮಕ್ಕಿ ಕ್ರಾಸ್ ಬಳಿ ಅಪಘಾತ: ಬೈಕ್ ಸವಾರ ಗಂಭೀರ