ಭಟ್ಕಳ: Follow up/ ಶಾಲಾ ಮಕ್ಕಳನ್ನು ಹೊತ್ತುಕೊಂಡು ಬರುತ್ತಿದ್ದ ವಾಹನ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಪಲ್ಟಿಯಾಗಿದೆ ಎಂದು ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ (Sagar) ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿನಿ ವಾಸುಕಿಯ ತಂದೆ ಸಾಗರ ತಾಲೂಕಿನ ಹೊಸಾಡ ನಿವಾಸಿ ರಮೇಶ ತಂದೆ ಹನಮಂತ ನಾಯ್ಕ ದೂರು ದಾಖಲಿಸಿದ್ದಾರೆ. ವಾಹನ ಚಲಾಯಿಸುತ್ತಿದ್ದ ಸಾಗರ ತಾಲೂಕಿನ ನಾಗವಳ್ಳಿಯ ಹರಣಿಬಾಗಿಲು ನಿವಾಸಿ ಮಂಜುನಾಥ ಜಟ್ಟಪ್ಪ ನಾಯ್ಕ (೪೨) ವಿರುದ್ಧ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಗಳವಾರ ಮಾ ೩ರಂದು ಬೆಳಿಗ್ಗೆ ೦೮-೩೦ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿನ ಬೆಳಲಖಂಡ ಗ್ರಾಮದ ಕಡಸಲಗದ್ದೆ ಪುರಸಭೆ ಕಸ್ ಹಾಕುವ ಸ್ಥಳದ ಹತ್ತಿರ ರಾಜ್ಯ ಹೆದ್ದಾರಿ-೫೦ ಭಟ್ಕಳ ಸಾಗರ ರಸ್ತೆಯ ಮೇಲೆ ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ನಾಗವಳ್ಳಿ ಕಡೆಯಿಂದ ಭಟ್ಕಳದ ಕಡೆಗೆ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದರಿಂದ ರಸ್ತೆಯ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಕೆಡವಿ ಅಪಘಾತಪಡಿಸಲಾಗಿತ್ತು. ವಾಹನದಲ್ಲಿದ್ದ ೬-೧೧ ವರ್ಷ ವಯಸ್ಸಿನ ೧೩ ಶಾಲಾ ಮಕ್ಕಳು ಗಾಯಗೊಂಡಿದ್ದಾರೆ.
arrested/ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್ ಹಾಕಿದ ಭಟ್ಕಳದ ವ್ಯಕ್ತಿ ಬಂಧನ
ನಾಗವಳ್ಳಿಯ ಹೊಸಾಡ ನಿವಾಸಿ ವಾಸುಕಿ ತಂದೆ ರಮೇಶ ನಾಯ್ಕ (೭) ನಾಗವಳ್ಳಿಯ ಕ್ಯಾದಗೋಡ ನಿವಾಸಿ ಪ್ರದ್ವಿತ ತಂದೆ ರಾಘವೇಂದ್ರ ಸಿ ಕೆ (೧೨), ನಾಗವಳ್ಳಿ ಗುಳ್ಳಾಡಿಯ ನಕ್ಷಾ ತಂದೆ ನಾಗರಾಜ ನಾಯ್ಕ (೮), ನಾಗವಳ್ಳಿ ಹೆರೋಡಿಯ ಅಕಾಂಶ ತಂದೆ ಚಂದ್ರ ಬೋವಿ (೧೧) ಮತ್ತು ಆತನ ಸಹೋದರ ಅಭಿನಂದನ(೬), ನಾಗವಳ್ಳಿಯವರಾದ ಜೋಸ್ಮಿನ ತಂದೆ ಮಾರ್ಟಿನ (೧೧), ಜಿಯೋನಾ ರೆಜಿ ಮೆಥ್ಯೋವ್ (೧೨), ಟ್ರೀಸಾ ತಂದೆ ಮಾರ್ಟಿನ (೧೪), ಕುಂಟವಾಣಿ ಅರುಕ್ಕಿಯವರಾದ ದಿಶಾ ತಂದೆ ನವೀನ ಜೈನ್ (೬), ಆಕೆಯ ಸಹೋದರಿ ತಮನ್ನಾ (೧೦), ಸನತ್ ತಂದೆ ರಾಘವೇಂದ್ರ ಶೆಟ್ಟಿ (೯), ಹಾಡುವಳ್ಳಿಯ ಅರವ ತಂದೆ ಪ್ರಭಾತ ಇಂದ್ರ (೫) ಹಾಗೂ ಕ್ಯಾದಗೋಡದ ವಂಶಿತಾ ತಂದೆ ಶ್ರೀನಿವಾಸ (೧೧) ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿವೆ. ಚಾಲಕನೂ ಗಾಯಗೊಂಡಿದ್ದು, ಎಲ್ಲರೂ ಭಟ್ಕಳ ಸರ್ಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. (Follow up)
stranded/ ದುಬೈನಲ್ಲಿ ಸಿಲುಕಿದ ಭಟ್ಕಳಿಗರು: ಅಧಿಕೃತ ಪಟ್ಟಿಯಲ್ಲಿಲ್ಲ ಉತ್ತರ ಕನ್ನಡ



