ಭಟ್ಕಳ (Bhatkal) : ಕಳೆದೊಂದು ದಶಕದಲ್ಲಿ ಭಾರತದ ಪಶ್ಚಿಮ ಘಟ್ಟಗಳು (Western Ghat) ೫೮ ಚ.ಕಿ.ಮೀ. ಅರಣ್ಯವನ್ನು (forest) ಕಳೆದುಕೊಂಡಿವೆ. ಆದರೆ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯೇನೆಂದರೆ, ಉತ್ತರ ಕನ್ನಡ ಜಿಲ್ಲೆ ೧೬೦ ಚ.ಕಿ.ಮೀ. ಅರಣ್ಯ ಗಳಿಸಿದೆ. ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ದ್ವೈವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ವರದಿಯು ೨೦೧೧ ಮತ್ತು ೨೦೨೧ ರ ನಡುವೆ ಅರಣ್ಯೇತರ ಬಳಕೆಗೆ ಸುಮಾರು ೪೭ ಸಾ.ಚ.ಕಿ.ಮೀ ಅರಣ್ಯ ಪ್ರದೇಶಗಳು ಭಾರತದಲ್ಲಿ ನಷ್ಟವಾಗಿರುವುದನ್ನು ಒತ್ತಿಹೇಳಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದ್ವೈವಾರ್ಷಿಕ ಮಾಹಿತಿಯ ಪ್ರಕಾರ, ೨೦೨೧-೨೩ರ ಅವಧಿಯಲ್ಲಿ ಭಾರತದ (India) ನಿವ್ವಳ ಅರಣ್ಯ (forest) ವ್ಯಾಪ್ತಿ ೧೪೪೫ ಚದರ ಕಿಲೋಮೀಟರ್ಗಳಷ್ಟು ಹೆಚ್ಚಾಗಿದೆ. ಆದರೆ, ಜೈವಿಕ ವೈವಿಧ್ಯದಿಂದ ಸಮೃದ್ಧವಾಗಿರುವ ಪಶ್ಚಿಮ ಘಟ್ಟಗಳು, ಈಶಾನ್ಯ, ಮುಕ್ತ ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ಮ್ಯಾಂಗ್ರೋವ್ ಕಾಡುಗಳಲ್ಲಿ (Mangrove forest) ನೈಸರ್ಗಿಕ ಅರಣ್ಯ ಸಾಂದ್ರತೆಯನ್ನು ಕಳೆದುಕೊಂಡಿದೆ. ಒಟ್ಟು ಅರಣ್ಯ ವ್ಯಾಪ್ತಿಯು ೨೦೨೧ರಲ್ಲಿ ದೇಶದ ಭೌಗೋಳಿಕ ಪ್ರದೇಶದ ೨೧.೭೧% ರಿಂದ ೨೦೧೩ರಲ್ಲಿ ೨೧.೭೬% ಕ್ಕೆ ಏರಿದೆ. ಮರಗಳ ಹೊದಿಕೆಯು ೨.೯೧% ರಿಂದ ೩.೪೧% ಕ್ಕೆ ಏರಿದೆ.
ಇದನ್ನೂ ಓದಿ : ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿ; ಮಹಿಳೆಗೆ ಗಾಯ
ಕೇಂದ್ರ ಪರಿಸರ (Environmnet), ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಡೆಹ್ರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ಶನಿವಾರ ೧೮ನೇ ಭಾರತೀಯ ಅರಣ್ಯ ರಾಜ್ಯ ವರದಿ-೨೦೨೩ನ್ನು ಬಿಡುಗಡೆ ಮಾಡಿದ್ದಾರೆ. ೨೦೨೧ರಲ್ಲಿ ೨೪.೬೨% ರಷ್ಟಿದ್ದ ಭಾರತದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು ೨೦೨೩ರಲ್ಲಿ ೮.೨೭ಲಕ್ಷ ಚದರ ಕಿಲೋಮೀಟರ್ಗಳಿಗೆ (೨೫.೧೭%) ಹೆಚ್ಚಾಗಿದೆ ಎಂದು ವರದಿ ತೋರಿಸುತ್ತದೆ. ಕುರುಚಲು ಪ್ರದೇಶವು (scrub area) ೪೩.೬೨೨ ಚದರ ಕಿಮೀ (೧.೩೩% ಹೆಚ್ಚಳ) ಮತ್ತು ಅರಣ್ಯೇತರ ಪ್ರದೇಶವು ೨೪,೧೬,೪೮೯ ಚದರ ಕಿಮೀ (೭೩.೫೦%).
ಇದನ್ನೂ ಓದಿ : Editorial/ ಗೋವುಗಳ ರಕ್ಷಣೆ ಆದ್ಯ ಕರ್ತವ್ಯವಾಗಲಿ
ಕೃಷಿ ಅರಣ್ಯ (agroforestry) ಯೋಜನೆಗಳ ಸರ್ಕಾರದ ಉತ್ತೇಜನದ ಕಾರಣದಿಂದಾಗಿ, ರೈತರು ತಮ್ಮ ಹೊಲಗಳ ಸುತ್ತಲೂ ಮರಗಳನ್ನು ನೆಡುತ್ತಿದ್ದಾರೆ. ೨೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮರಗಳ ಹೊದಿಕೆ ಹೆಚ್ಚಿದೆ ಎಂದು ವರದಿ ತೋರಿಸಿದೆ. ಇದಲ್ಲದೆ, ಮ್ಯಾಂಗ್ರೋವ್ ಕಾಡುಗಳು ೭.೪೩ ಚ.ಕಿ.ಮೀ. ರಷ್ಟು ಕಡಿಮೆಯಾಗಿದೆ. ಗುಜರಾತ್ ಮತ್ತು ಅಂಡಮಾನ್ ಅತಿ ಹೆಚ್ಚು ಕುಸಿತ ಕಂಡಿದ್ದರೆ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಮ್ಯಾಂಗ್ರೋವ್ ಕಾಡು ಹೆಚ್ಚಳವಾಗಿದೆ.
ಇದನ್ನೂ ಓದಿ : ಭಟ್ಕಳದಲ್ಲಿ ಪಡಿತರ ಅಕ್ಕಿ ಸಾಗಾಟ ಪತ್ತೆ