ಭಟ್ಕಳ: “ಶಿಕ್ಷಣವು ಪ್ರಗತಿಪರ ಸಮಾಜಕ್ಕೆ ಅಡಿಪಾಯವಾಗಿದೆ. ಏಕೆಂದರೆ ಇದು ರಾಷ್ಟ್ರೀಯ ಅಭಿವೃದ್ಧಿಗೆ ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಮೌಲ್ಯದೊಂದಿಗೆ ವ್ಯಕ್ತಿಗಳನ್ನು ಸಬಲೀಕರಣಗೊಳಿಸುತ್ತದೆ” ಎಂದು ಹುರುಳಿಸಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರಾಮ ನಾಯ್ಕ ಹೇಳಿದರು. ಭಟ್ಕಳ ರೋಟರಿ ಕ್ಲಬ್ (rotary club) ವತಿಯಿಂದ ತಾಲೂಕಿನ ಹುರುಳಿಸಾಲ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ (Furniture donation) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರೋಟರಿ ಅಧ್ಯಕ್ಷ ಶಾಖಿರ್ ಹುಸೈನ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಮಮತಾ ವಾರಿಕರ್ ನಿರೂಪಿಸಿದರು ರೋಟರಿ ಕಾರ್ಯದರ್ಶಿ ಮಿಸ್ಬಾ ಉಲ್ ಹಕ್ ವಂದಿಸಿದರು. ರೋಟರಿ ಸದಸ್ಯರಾದ ಸಾದುಲ್ಲಾ ದಾಮ್ದಾ, ಮಹೇಶ್ ನಾಯಕ, ಶ್ರೀನಾಥ್ ಪೈ, ಪ್ರಶಾಂತ ಕಾಮತ, ಆನ೦, ಶಾಲಾ ಸಹ ಶಿಕ್ಷಕಿ ಜಯಶ್ರೀ ನಾಯ್ಕ, ಅಂಗನವಾಡಿ ಶಿಕ್ಷಕಿ ನಸೀಮಾ ಬಾನು, ಸಹಾಯಕಿ ಮಾದೇವಿ ನಾಯ್ಕ, ಭಟ್ಕಳ ರೋಟರಾಕ್ಟ್ ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ ಉಪಸ್ಥಿತರಿದ್ದರು./ Furniture donation
Responsible AI/ ‘ಜವಾಬ್ದಾರಿಯುತ ಎಐ’ ಅಭಿಯಾನದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಶಿಕ್ಷಕರ ಸಹಭಾಗಿತ್ವ



