ಭಟ್ಕಳ: ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿದ ಕಾರಣ ಗ್ರಾಮ ಆಡಳಿತ ಆಧಿಕಾರಿಗಳು ಸ್ಥಳೀಯ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗಳು ತಲೆದೋರಿದರೆ ಗ್ರಾಮ ಆಡಳಿತ ಅಧಿಕಾರಿಗಳನ್ನೇ ಹೊಣೆಗಾರರಾಗಿ ಮಾಡಲಾಗುವುದು ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಮಂಗಳವಾರ ಭಟ್ಕಳ (Bhatkal) ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು. ೨೦೨೫-೦೨೬ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ಬಂದ ಅನುದಾನವನ್ನು ಮಾರ್ಚ್ ಅಂತ್ಯದ ಒಳಗೆ ಬಳಸಿಕೊಳ್ಳಬೇಕು. ಒಂದೊಮ್ಮೆ ಅನುದಾನ ವಾಪಾಸ್ ಹೋದಲ್ಲಿ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ತರಲು ಹೊರಗಡೆ ಚೀಟಿ ನೀಡದೇ ಅಗತ್ಯ ಔಷಧಿಗಳನ್ನು ಆಸ್ಪತ್ರೆಯಿಂದ ಖರೀದಿ ಮಾಡಿ ರೋಗಿಗಳಿಗೆ ನೀಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಅರುಣ ಅವರಿಗೆ ಸೂಚಿಸಿದರು.

Furniture donation/ಅಂಗನವಾಡಿಗೆ ರೋಟರಿ ಕ್ಲಬ್ ಪೀಠೋಪಕರಣ ಕೊಡುಗೆ

ಹೈನುಗಾರಿಕೆ ಮಾಡುವರರಿಗೆ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ೬ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಭಟ್ಕಳದಲ್ಲಿ ರೈತರಿಗೆ ಅದರ ಬಗ್ಗೆ ಮಾಹಿತಿ ಕೊರತೆ ಇದೆ. ಪಶುಸಂಗೋಪನಾ ಇಲಾಖೆಯಿಂದ ಹಾಲು ಉತ್ಪಾದಕ ಕೇಂದ್ರಗಳನ್ನು ತೆರೆದು ಹೈನುಗಾರಿಕೆ ಮಾಡುವ ಪ್ರತಿ ರೈತರು ಸರ್ಕಾರದ ಪ್ರೋತ್ಸಾಹಧನ ಪಡೆಯುವಂತೆ ಯೋಜನೆ ರೂಪಿಸಬೇಕು ಎಂದು ಸಚಿವ ಪಶುಸಂಗೋಪನಾ ವೈದ್ಯಾಧಿಕಾರಿ ಶಿವಕುಮಾರ ಅವರಿಗೆ ತಿಳಿಸಿದರು.

Responsible AI/ ‘ಜವಾಬ್ದಾರಿಯುತ ಎಐ’ ಅಭಿಯಾನದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಶಿಕ್ಷಕರ ಸಹಭಾಗಿತ್ವ

೨೦೨೬-೨೭ನೇ ಸಾಲಿನ ಅಂತ್ಯಕ್ಕೆ ತಾಲೂಕಿನ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳು ಸ್ವಂತ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಹೊಂದಿರಬೇಕು. ಅದಕ್ಕೆ ಬೇಕಾದ ಎಲ್ಲಾ ಅನುದಾನ ನೀಡಲಾಗುವುದು ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಬಿಇಒ ವೆಂಕಟೇಶ ನಾಯಕ ಅವರಿಗೆ ತಿಳಿಸಿದರು.

Makkala Santhe/ಸಾವಯವ ಕೃಷಿ ಉತ್ಪನ್ನಗಳೇ ಮಕ್ಕಳ ಸಂತೆಯ ಆಕರ್ಷಣೆ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳನ್ನು ಕರೆತರಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಡಿಪೋ ವ್ಯವಸ್ಥಾಪಕ ದಿವಾಕರ ಅವರಿಗೆ ಸೂಚಿಸಿದರು. ಭಟ್ಕಳ – ಹೊನ್ನಾವರ (Honnavar) ಜನಸ್ನೇಹಿ ಬಸ್ ನಿಲ್ಲಿಸಿದ ಬಗ್ಗೆ ಪ್ರಶ್ನಿಸಿದ ಸಚಿವರು, ನನ್ನ ಶಾಸಕರ ಅವಧಿಯಲ್ಲಿ ನೀಡಿದ ೨೦ ಬಸ್ಸನ್ನು ಯಾರಿಗೆ ಮಾರಿದ್ದೀರಿ ಎಂದು ಪ್ರಶ್ನಿಸಿದರು. ಕುಂದಾಪುರ (Kundapura) ಮತ್ತು ಮಂಗಳೂರಿಗೆ (Mangaluru) ಭಟ್ಕಳ ಡಿಪೋದಿಂದ ಬಸ್ ಬಿಡುವ ಬಗ್ಗೆ ಯೋಜನೆ ರೂಪಿಸಿ, ಬಸ್ ಅಗತ್ಯ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಸೂಚಿಸಿದರು. ರೂಟ್ ಬಸ್ ಕೆಟ್ಟು ನಿಂತರೆ ನನ್ನ ಗಮನಕ್ಕೆ ತನ್ನಿ, ಸುಸ್ಥಿತಿಯಲ್ಲಿರದ ಬಸ್ಸನ್ನು ಗುಜರಿಗೆ ಹಾಕಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂತಲೂ ತಾಕೀತು ಮಾಡಿದರು.

Padayatra/ಹೂತ್ಕಳದಿಂದ ಕಿತ್ರೆವರೆಗೆ ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನುದಾನ ಅಗತ್ಯ ಇದ್ದಲ್ಲಿ ಕೇಳಿ ಪಡೆದುಕೊಳ್ಳಿ. ಮಳೆಗಾಲ ಪೂರ್ವದಲ್ಲಿ ಚರಂಡಿ ಹೂಳೆತ್ತಿ ಸುಗಮವಾಗಿ ನೀರು ಹರಿದು ಹೋಗಲು ಅವಕಾಶ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

PSI injured/ ಕಾರು ಬೈಕಿಗೆ ಡಿಕ್ಕಿ: ಪಿಎಸ್ಐ ಮತ್ತವರ ಪತ್ನಿಗೆ ಗಾಯ

ತಾ ಪಂ ಆಡಳಿತಾಧಿಕಾರಿ ಶಿವಕ್ಕ ಎಂ, ಪ್ರಭಾರ ಉಪವಿಭಾಗಾಧಿಕಾರಿ ಪ್ರವೀಣ, ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ತಾ ಪಂ ಇಒ ಸುನೀಲ ಎಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Mankal Vaidya/ ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಸಚಿವ ಮಂಕಾಳ ವೈದ್ಯ