ಭಟ್ಕಳ (Bhatkal) : ತಾಲೂಕಿನ ಹಿರಿಯ ಧುರೀಣ ತೆರ್ನಮಕ್ಕಿಯ ಗಣೇಶ ನಾಯ್ಕ (೬೧)ಇಂದು ನಸುಕಿನ ಜಾವ ಹೃದಯಾಘಾತದಿಂದ (Heart Attacked) ನಿಧನರಾಗಿದ್ದಾರೆ.

ವಿಡಿಯೋ ಮತ್ತು ಸುದ್ದಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಿ.

ಇಂದು ಡಿ.೧ರಂದು ನಸುಕಿನ ಜಾವ ೪ ಗಂಟೆ ಸುಮಾರಿಗೆ ಹೃದಯಾಘಾತಕ್ಕೊಳಗಾದ (Heart Attacked) ಅವರನ್ನು ಮುರ್ಡೇಶ್ವರದ (Murdeshwar) ಆರ್‌.ಎನ್‌.ಎಸ್‌. ಆಸ್ಪತ್ರೆಗೆ (RNS Hospital) ಕರೆದೊಯ್ಯಲಾಯಿತು. ಆದರೆ, ಅವರ ಉಸಿರು ನಿಂತಿತ್ತು. ನಂತರ ಮರಣೋತ್ತರ ಪರೀಕ್ಷೆಗಾಗಿ ಭಟ್ಕಳದ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತರಲಾಯಿತು.  ಸುದ್ದಿ ತಿಳಿದು ಬಿಜೆಪಿ ಮುಖಂಡರು, ಕಾರ್ಯಕರ್ತರು, ಟೆಂಪೋ ಚಾಲಕರು ಮತ್ತು ಕಾರ್ಯಕರ್ತರು ಸೇರಿದಂತೆ ಅವರ ಹಿತೈಷಿಗಳು, ಬಂಧುಗಳು ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಬಂದು, ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ : Editorial/ ಪ್ರವಾಸೋದ್ಯಮಿಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

ಭಟ್ಕಳದ ಸರ್ಕಾರಿ ಆಸ್ಪತ್ರೆಯಿಂದ ತೆರ್ನಮಕ್ಕಿಯ ಸ್ವಗೃಹದವರೆಗೆ ಮೆರವಣಿಗೆ ಮೂಲಕ ಮೃತದೇಹವನ್ನು ಸಾಗಿಸಲಾಗುತ್ತಿದೆ. ಟೆಂಪೋ ಯುನಿಯನ್‌ ಅವರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಭಟ್ಕಳದಿಂದ ತೆರ್ನಮಕ್ಕಿಯವರೆಗೆ ಟೆಂಪೋಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಕೂಡ ಬೈಕ್‌ ನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.  ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :   ಬಸ್‌ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಟೆಂಪೊ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ, ಬಿಜೆಪಿ ಭಟ್ಕಳ ಗ್ರಾಮೀಣಾಧ್ಯಕ್ಷ ಸೇರಿದಂತೆ ಹಲವಾರು ಸಂಘಸಂಸ್ಥೆಗಳಲ್ಲಿ ಗಣೇಶ ನಾಯ್ಕ ಜವಾಬ್ದಾರಿ ನಿರ್ವಹಿಸಿದ್ದರು. ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಲಾರಿ ಮಾಲಕರು-ಚಾಲಕರ ಸಂಘದಲ್ಲಿ ಅಧ್ಯಕ್ಷ ಸೇರಿದಂತೆ ತಾಲೂಕು ಹಾಗು ಜಿಲ್ಲಾ ಮಟ್ಟದ ಹಲವಾರು ಸಂಘ ಸಂಸ್ಥೆಗಳಲ್ಲಿ, ಸಹಕಾರಿ ಬ್ಯಾಂಕ್ ಗಳಲ್ಲಿ ಗುರುತರವಾದ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ :   ಗ್ರಾ.ಪಂ.ಸದಸ್ಯನಿಗೆ ಧರ್ಮದೇಟು