ಹೊನ್ನಾವರ : ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ (Honnavar) ಟೊಂಕ ಕಡಲ ತೀರದಲ್ಲಿ (beach) ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ (Olive Ridley) ಆಮೆಯ ೯೫ ಮರಿಗಳನ್ನು (Hatchling) ಅರಬ್ಬಿ ಸಮುದ್ರಕ್ಕೆ ಬಿಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಡಿ.೨೪ರಂದು ಟೊಂಕ ಕಡಲ ತೀರದಲ್ಲಿ ಕಡಲಾಮೆಯು ಮೊಟ್ಟೆ ಇಟ್ಟಿತ್ತು. ೧೨೪ ಮೊಟ್ಟೆಗಳನ್ನು ಸ್ಥಳೀಯ ಮೀನುಗಾರ ಮುಖಂಡರಾದ ರಾಜೇಶ ತಾಂಡೆಲ್, ರಮೇಶ ತಾಂಡೇಲ್ ಹಾಗೂ ಭಾಸ್ಕರ ತಾಂಡೆಲ್ ಅವರು ಗುರುತಿಸಿ, ಅರಣ್ಯ ಇಲಾಖೆ (forest department) ಸಹಕಾರದೊಂದಿಗೆ ಮೊಟ್ಟೆಗಳನ್ನು (turtle eggs) ಸುರಕ್ಷಿತ ಜಾಗದಲ್ಲಿ ಸ್ಥಳಾಂತರಿಸಲಾಗಿತ್ತು. ಅವುಗಳಿಗೆ ನೆಟ್ ನಿಂದ ಸುತ್ತ ಬೇಲಿ ಹಾಕಿ ನಾಯಿ ಹಾಗೂ ಪಕ್ಷಿಗಳಿಂದ ಸುರಕ್ಷತೆ ವಹಿಸಲಾಗಿತ್ತು.

ಇದನ್ನೂ ಓದಿ : Bhatkal Gang/ ಕಾಡುಕೋಣ ಬೇಟಿಯಾಡಿದ ಭಟ್ಕಳ ಗ್ಯಾಂಗ್‌ ಸೆರೆ

ಮಂಗಳವಾರ ಫೆ.೧೧ರಂದು ಬೆಳಗಿನ ಜಾವ ಆ ಮೊಟ್ಟೆಗಳು ಮರಿಯಾಗಿವೆ (Hatchling) . ೯೫ ಮರಿಗಳನ್ನು (baby turtle) ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ ಅವರ ನೇತೃತ್ವದಲ್ಲಿ, ಹೊನ್ನಾವರ ಫೌಂಡೇಶನ್ ಸಹಕಾರದೊಂದಿಗೆ ಸಮುದ್ರಕ್ಕೆ ಬಿಡಲಾಯಿತು. ಅಳಿವಿನ ಅಂಚಿನಲ್ಲಿರುವ ಆಮೆಗಳ ಸಂರಕ್ಷಣೆಗೆ ಶ್ರಮವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮೀನುಗಾರ ಮುಖಂಡರು, ಸ್ಥಳೀಯರು ಹಾಗೂ ಹೊನ್ನಾವರ ಫೌಂಡೇಶನ್ ಗುರುಪ್ರಸಾದ, ಮೀನುಗಾರ ಮುಖಂಡರಾದ ಭಾಸ್ಕರ ತಾಂಡೇಲ, ಗಣಪತಿ ತಾಂಡೇಲ, ಸಾಹೋಷ್ ತಾಂಡೇಲ, ಅಚ್ಚಾ ಸಾಬ್, ಫಕೀರ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : Heart check up/ ಉಚಿತ ಹೃದಯ ತಪಾಸಣಾ ಶಿಬಿರ

ಹೊನ್ನಾವರದ ಟೊಂಕ ಕಡಲ ತೀರದಲ್ಲಿ ಅರಣ್ಯ ಇಲಾಖೆಯು ಆಮೆ ಗೂಡುಕಟ್ಟುವ ಸ್ಥಳಗಳನ್ನು ರಕ್ಷಿಸುತ್ತಿದೆ. ಗೂಡುಕಟ್ಟುವ ಅವಧಿಯು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಇರುತ್ತದೆ. ಇದಲ್ಲದೆ ಮಂಗಳೂರಿನಲ್ಲಿ (Mangaluru) ಈ ಹಂಗಾಮಿನಲ್ಲಿ ಇದುವರೆಗೆ ಇಡ್ಯ, ಪಣಂಬೂರು (Panambur) , ಬೆಂಗ್ರೆ ಮತ್ತು ಸಸಿಹಿತ್ಲುಗಳಲ್ಲಿ ೧೪ ಗೂಡುಕಟ್ಟುವ ತಾಣಗಳನ್ನು ಅರಣ್ಯ ಇಲಾಖೆ ಪತ್ತೆ ಮಾಡಿ, ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.  ೨೦೨೪ರ ಡಿಸೆಂಬರ್ ೧೬ರಂದು ಸಸಿಹಿತ್ಲುವಿನಲ್ಲಿ ಹಾಕಿದ ೧೦೧ ಮೊಟ್ಟೆಗಳಲ್ಲಿ ೯೦ ಮರಿಗಳನ್ನು ಫೆಬ್ರವರಿ ೬ರಂದು ಸಮುದ್ರಕ್ಕೆ ಬಿಡಲಾಗಿದೆ. ಅರಣ್ಯ ಇಲಾಖೆಯ ಸಂರಕ್ಷಣಾ ಕ್ರಮವಾಗಿ ಶೇ.೯೪ರಷ್ಟು ಮೊಟ್ಟೆಗಳು ಒಡೆದು ಮರಿಗಳಾಗಿ ಮಾರ್ಪಡುತ್ತಿವೆ.

ಆಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Book Release/ ಮಧುರಗಾನ ಪುಸ್ತಕ ಬಿಡುಗಡೆ