ಭಟ್ಕಳ(Bhatkal): ಹವ್ಯಕರು (Havyak) ತೋರಿಕೆಗೆ ಸಂತಸದಿಂದ ಇದ್ದಂತೆ ಕಂಡರೂ ಆಂತರಿಕವಾಗಿ ನಾನು ಸಂತೋಷವಾಗಿದ್ದೇಯೇ ಎನ್ನುವುದನ್ನು ಪ್ರಶ್ನಿಸಿಕೊಳ್ಳುವಂತಾಗಿದೆ. ಹವ್ಯಕ ಪ್ರತಿಭೆಗಳು ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಗೆ ಹೋಗುತ್ತಿರುವುದರಿಂದ ನಾವು ನಮ್ಮತನವನ್ನು ಮರೆತಿದ್ದೇವೆ. ಇದು ಮುಂದಿನ ತಲೆಮಾರಿಗೆ ತೊಂದರೆಯಾಗುವ ಲಕ್ಷಣಗಳಿವೆ ಎಂದು ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಎಚ್ಚರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ತಾಲೂಕಿನ ಬಸ್ತಿಮಕ್ಕಿಯಲ್ಲಿರುವ ಶ್ರೀ ರಾಘವೇಶ್ವರ (Sri Raghaveshwar) ಭಾರತೀ ಹವ್ಯಕ ಸಭಾ ಭವನದಲ್ಲಿ ಭಟ್ಕಳ ತಾಲೂಕಾ ಹವ್ಯಕ (Havyak) ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಜೀವನದಲ್ಲಿ ತಾಳ್ಮೆ ಮುಖ್ಯ ಎಂದ ಅವರು ನಮ್ಮ ಯುವ ಪೀಳಿಗೆಯನ್ನು ವ್ಯಾವಹಾರಿಕವಾದ ವಾತಾವರಣದಲ್ಲಿ ಬೆಳೆಸುವ ಅಗತ್ಯತೆ ಇದೆ. ಹತ್ತು ವರ್ಷಗಳ ಕಾಲ ಈ ಸಂಘಟನೆಯು ಮಾದರಿಯಾಗಿ ಬೆಳೆದು ಬಂದಿದೆ. ಮಹಾಗಣಪತಿಯ ಕೃಪೆಯಿಂದ ಉತ್ತಮವಾಗಿ ಕಾರ್ಯನಿವಹಿಸುತ್ತಿದೆ ಎಂದರು.
ಇದನ್ನೂ ಓದಿ : ಅ.೩ರಿಂದ ಭಟ್ಕಳ ತಾಲೂಕಿನಾದ್ಯಂತ ನವರಾತ್ರಿ ಉತ್ಸವ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಮಾತನಾಡಿ, ಹವ್ಯಕರು ನಮ್ಮ ಆಚರಣೆ, ಭಾಷೆ, ಅಡುಗೆಯಿಂದಲೇ ಗುರುತಿಸಿಕೊಂಡವರು ನಾವು, ಅವುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ. ಇಂದು ನಮ್ಮ ತಂಬಳಿ, ಹಸಿ, ಸಂಡಿಗೆ, ಗೊಜ್ಜುಗಳು ಬಾತ್‌ಗಳಿಂದಾಗಿ ಮರೆಯಾಗುತ್ತಿದೆ. ಇದು ದೊಡ್ಡ ಅಪಾಯ ತಂದೊಡ್ಡಬಹುದು ಎಂದು ಎಚ್ಚರಿಸಿದರು. ಹವ್ಯಕ ಬ್ರಾಹ್ಮಣರು ಹಿಂದಿನಿAದಲೂ ಬಡ ಬ್ರಾಹ್ಮಣರು ಎಂದು ಗುರುತಿಸಿಕೊಂಡು ಬಂದರು ಸಹ ನಮ್ಮತನವನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ. ಅದನ್ನು ಮುಂದುವರಿಸಿಕೊಂಡು ಹೋಗುವಂತೆಯೂ ಕರೆ ನೀಡಿದರು.
ಇದನ್ನೂ ಓದಿ : ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ
ಸಂಘದ ಸಂಸ್ಥಾಪಕ ಅಧ್ಯಕ್ಷ, ನಿವೃತ್ತ ತಹಸೀಲ್ದಾರ ಡಿ.ಜಿ.ಹೆಗಡೆ ಮಾತನಾಡಿ, ಬ್ರಾಹ್ಮಣರು ಮೊದಲಿನಿಂದಲೂ ಸವಾಲನ್ನು ಮೆಟ್ಟಿ ನಿಂತವರು. ನಮ್ಮ ಸಂಘಟನೆಯ ವತಿಯಿಂದ ಯುವ ಪ್ರತಿಭೆಗಳಿಗೆ ವಿವಿಧ ಸ್ಮರ್ಧಾತ್ಮಕ ಪರೀಕ್ಷಾ ತಯಾರಿಯ ಕುರಿತು, ಉನ್ನತ ಶಿಕ್ಷಣದ ಕುರಿತು ಸಹಾಯ ಮಾಡುವ ಇಚ್ಚೆ ಇದ್ದು ಮುಂದಿನ ದಿನಗಳಲ್ಲಿ ನೆರವೇರಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ನಿವೃತ್ತ ಯೋಧ ಮಂಜುನಾಥ ವಿ. ಹೆಗಡೆ ವಹಿಸಿದ್ದರು.
ಇದನ್ನೂ ಓದಿ : ಪರ್ತಗಾಳಿ ಶ್ರೀಗಳ ದಿಗ್ವಿಜಯ ಮಹೋತ್ಸವ ಸಂಪನ್ನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ನಿವೃತ್ತ ಯೋಧ ಮಂಜುನಾಥ ವಿ. ಹೆಗಡೆ ವಹಿಸಿದ್ದರು. ಇನ್ನೋರ್ವ ಮುಖ್ಯ ಅತಿಥಿ ತಹಸೀಲ್ದಾರ ಅಶೋಕ ಎನ್. ಭಟ್ಟ, ಸಂಘದ ಗೌರವ ಮಾರ್ಗದರ್ಶಕ ಶಂಭು ಎನ್. ಹೆಗಡೆ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಧಾ ಭಟ್ಟ, ಹವ್ಯಕ ವಲಯದ ಅಧ್ಯಕ್ಷೆ ರೇಶ್ಮಾ ಭಟ್ಟ, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ, ಹಿರಿಯರಾದ ಎಂ.ವಿ.ಹೆಗಡೆ ಉಪಸ್ಥಿತರಿದ್ದರು.
ಇದನ್ನೂ ಓದಿ : ಸೆಪ್ಟೆಂಬರ್ ೩೦ರಂದು ವಿವಿಧೆಡೆ ಅಡಿಕೆ ಧಾರಣೆ
ಎಸ್.ಎಸ್.ಎಲ್.ಸಿ. (SSLC) ಹಾಗೂ ಪಿ.ಯು.ಸಿ.(PUC)ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿಕ ಶ್ರೀಧರ ಹೆಬ್ಬಾರ, ವೈದಿಕ ನೀಲಕಂಠ ಉಪಾಧ್ಯಾಯ, ಸಾಮಾಜಿಕ ಕಾರ್ಯಕರ್ತ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ, ಸಂಗೀತ ಕಲಾವಿದ ಸುಬ್ರಹ್ಮಣ್ಯ ಹೆಗಡೆ, ಸಾಹಿತಿ ವೆಂಕಟ್ರಮಣ ಹೆಗಡೆ (ಯೋಗೀಶ) ಅವರನ್ನು ಸನ್ಮಾನ ಪತ್ರ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಜಲ ಜೀವನ ಮಿಷನ್ ಗೆ ಅಂತಾರಾಷ್ಟ್ರೀಯ ಮನ್ನಣೆ
ಸೀತಾ ಹೆಗಡೆ ಸ್ವಾಗತಿಸಿದರು. ಗಣೇಶ ಹೆಗಡೆ ಸ್ವಾಗತಿಸಿದರು. ಕೆ.ಬಿ. ಹೆಗಡೆ ವರದಿ ವಾಚಿಸಿದರು. ಕೆ.ಬಿ.ಹೆಗಡೆ ಹಾಗೂ ಐ.ವಿ. ಹೆಗಡೆ ನಿರ್ವಹಿದರು. ಗಣಪತಿ ಶಿರೂರು ವಂದಿಸಿದರು. ನಂತರ ನಡೆದ ಮನರಂಜನಾ ಕಾರ್ಯಕ್ರಮ ಯಕ್ಷ ನೃತ್ಯ ಗಾನ ಹಾಸ್ಯ ವೈಭವದಲ್ಲಿ
ಚಿಂತನಾ ಹೆಗಡೆ ಮಾಳಕೋಡ ಅವರ ಭಾಗವತಿಕೆ, ಗಜಾನನ ಭಂಡಾರಿ ಕೆರೆಕೋಣ ಅವರ ಮೃದಂಗ, ಸುಬ್ರಹ್ಮಣ್ಯ ಭಂಡಾರಿ ಗುಣವಂತೆ ಅವರ ಚಂಡೆವಾದನ ಹಾಗೂ ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಕಾಸರಕೋಡ, ಲೋಕೇಶ ನಾಯ್ಕ ಗುಣವಂತೆ, ಮಾರುತಿ ಬೈಲಗದ್ದೆ ಇವರ ನೃತ್ಯ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ : ಸಾಧಕರ ತರಬೇತುದಾರಳಿಗೆ ಸನ್ಮಾನ