ಗೋಕರ್ಣ(Gokarna) : ಜ್ಯೋತಿಷ್ಯ ಮತ್ತು ಆಯುರ್ವೇದಕ್ಕೆ ನಿಕಟ ಸಂಬಂಧವಿದೆ. ಜ್ಯೋತಿಷ್ಯದ ಮೂಲಕ ಆ ವ್ಯಕ್ತಿಯ ಸಂಪೂರ್ಣ ಆರೋಗ್ಯ ಮತ್ತು ಅನಾರೋಗ್ಯ ಸ್ಥಿತಿಯನ್ನು ಅರಿತುಕೊಳ್ಳಬಹುದು ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwar Shree) ನುಡಿದರು. ಅವರು ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ(Chaturmasya) ವ್ರತ ಕೈಗೊಂಡಿರುವ ಶ್ರೀಗಳು ೩೬ನೇ ದಿನವಾದ ಭಾನುವಾರ ‘ಕಾಲ’ ಸರಣಿಯಲ್ಲಿ ಪ್ರವಚನ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜೀವನಕ್ಕೆ ಯೋಗಚಿಂತನೆ ಹಾಗೂ ರೋಗಚಿಂತನೆ ಎರಡರ ಅಗತ್ಯವೂ ಇದೆ. ಜೀವನದಲ್ಲಿ ಯೋಗ ಸಿದ್ಧಿಸಬೇಕಾದರೆ ರೋಗ ಅಡ್ಡ ಬರಬಾರದು. ಆದ್ದರಿಂದ ಜ್ಯೋತಿಷ್ಯದಲ್ಲಿ ರೋಗಚಿಂತನ ಅತ್ಯಂತ ಮಹತ್ವ ಪಡೆದಿದೆ. ಗ್ರಹಗತಿಯ ವಿಶ್ಲೇಷಣೆಯಿಂದ ನಮ್ಮ ಆರೋಗ್ಯ ಸ್ಥಿತಿ ತಿಳಿಯುತ್ತದೆ. ಜಾತಕದ ವಿಶ್ಲೇಷಣೆಯಿಂದ ಬರಬಹುದಾದ ರೋಗಗಳನ್ನು ತಿಳಿದುಕೊಂಡು ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ಶ್ರೀಗಳು ಅಭಿಪ್ರಾಯಟ್ಟರು.
ಇದನ್ನೂ ಓದಿ : ಜಿ.ಪಿ.ಎಸ್. ವಿರುದ್ಧದ ಮೇಲ್ಮನವಿ ಪುನರ್ ಪರಿಶೀಲನೆಗೆ ಒತ್ತಾಯ
ಜಾತಕದಲ್ಲಿ ನವಾಂಶ ಎನ್ನುವುದು ಆ ವ್ಯಕ್ತಿಯ ಸೂಕ್ಷ್ಮತೆಯನ್ನು ಅರಿತುಕೊಳ್ಳಲು ಸಹಕರಿಸುತ್ತದೆ. ಕೆಲವೊಮ್ಮೆ ಮೇಲ್ನೋಟಕ್ಕೆ ದುರ್ಬಲ ಎಂದು ಕಂಡುಬಂದರೂ ಒಳಹೊಕ್ಕು ನೋಡಿದರೆ ಆ ಗ್ರಹ ಬಲಿಷ್ಠವಿರಬಹುದು. ಹೀಗೆ ಜ್ಯೋತಿಷ್ಯದಲ್ಲಿ ಸೂಕ್ಷ್ಮ ಹಾಗೂ ಸ್ಥೂಲ ಚಿಂತನೆಗಳು ಅಗತ್ಯ. ಜ್ಯೋತಿಷ್ಯದ ದೃಷ್ಟಿಯಿಂದ ಎರಡು ಬಗೆಯ ರೋಗಗಳಿವೆ. ಒಂದು ನಿಜ ಹಾಗೂ ಇನ್ನೊಂದು ಆಗಂತುಕ ರೋಗ. ಸಹಜವಾಗಿ ನಮ್ಮೊಳಗೆ ಹುಟ್ಟುವ ರೋಗಗಳು ನಿಜರೋಗಗಳಾದರೆ, ಹೊರಗಿನಿಂದ ಬರುವ ರೋಗಗಳು ಎರಡನೇ ವರ್ಗದಲ್ಲಿ ಸೇರುತ್ತವೆ. ಸಾಂಕ್ರಾಮಿಕ ರೋಗ, ಚರ್ಮರೋಗ ಇದರಲ್ಲಿ ಸೇರುತ್ತವೆ ಎಂದು ವಿವರಿಸಿದರು.
ಇದನ್ನೂ ಓದಿ : followup/ ಹೆಲ್ಮೆಟ್ ದಂಡ ಪ್ರಕರಣ; ಪಿಎಸ್‌ಐ ರಕ್ಷಣೆಗೆ ಮುಂದಾದ್ರಾ ಎಸ್ಪಿ?
ನಿಜ ರೋಗದಲ್ಲಿ ಒಂದು ಶರೀರಕ್ಕೆ ಸಂಬಂಧಿಸಿದ್ದು, ಇನ್ನೊಂದು ಮನಸ್ಸಿಗೆ ಸಂಬಂಧಿಸಿದ್ದು ಹೀಗೆ ಎರಡು ವಿಧಗಳಿವೆ. ಆಗಂತುಕ ರೋಗಗಳಲ್ಲಿ ದೃಷ್ಟನಿಮಿತ್ತಜ ಮತ್ತು ಅದೃಷ್ಟನಿಮಿತ್ತಜ ಹೀಗೆ ಕಾರಣ ಕಾಣುವ ಹಾಗೂ ಕಾಣದ ಎರಡು ವರ್ಗಗಳಿವೆ. ಶೋಕ, ಗಾಬರಿ ಕೋಪ, ಒತ್ತಡ, ಕ್ರೋಧ ಮನಸ್ಸಿನಲ್ಲಿ ಪದೇ ಪದೇ ಉದ್ಭವಿಸಿದಾಗ ಮಾನಸಿಕ ರೋಗಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರ ಜಾತಕದ ಲಗ್ನ ನಮ್ಮ ಅರೋಗ್ಯವನ್ನು ತಿಳಿಸಿದರೆ, ಅನಾರೋಗ್ಯವನ್ನು ಆರನೇ ಹಾಗೂ ಎಂಟನೇ ರಾಶಿಯಿಂದ ನೋಡಬಹುದು. ರೋಗಗಳಂತೆ ಬಾಧೆಗಳು ತೀರಾ ಅಪಾಯಕಾರಿ. ಏಕೆಂದರೆ ಇದು ಹಲವು ಬಾರಿ ರೋಗಕಾರಕವೂ ಆಗಬಹುದು. ಇಂಥ ಬಾಧೆಗಳನ್ನು ಅರಿತುಕೊಂಡು ಪ್ರಾಜ್ಞರ ಸಲಹೆ ಪಡೆದು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ : ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವು
“ಮಂಗಳೂರು (Mangaluru) ಮಂಡಲದ ಮಂಗಳೂರು ಮಧ್ಯ, ದಕ್ಷಿಣ, ಉತ್ತರ, ಉಡುಪಿ(Udupi), ಕುಂದಾಪುರ (Kundapur) ಮತ್ತು ಮುಡಿಪು ವಲಯಗಳ ಸರ್ವಸೇವೆ ಇಂದು ಸಂದಿದೆ. ಅಗ್ರಗಣ್ಯ ಮಂಡಲ. ಪ್ರವಾಹೋಪಾದಿಯಲ್ಲಿ ಭಕ್ತಸ್ತೋಮ ಹರಿದು ಬಂದಿದೆ. ಕಾರ್ಯಕರ್ತರು, ಪದಾಧಿಕಾರಿಗಳು ಮನೆ ಮನೆ ಸಂಪರ್ಕ ಮಾಡಿದಾಗ ಇಂಥದ್ದು ಸಾಧ್ಯವಾಗುತ್ತದೆ. ಸಂಘಟನೆ, ಸಮರ್ಪಣೆ ಎಲ್ಲದರಲ್ಲೂ ಮುಂದಿದೆ. ಗುರುದೃಷ್ಟಿ ಸಭಾಭವನಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ಸಮರ್ಪಣೆಯಾಗಿದೆ. ಒಂದು ವರ್ಷದಲ್ಲಿ ಸರಿಸುಮಾರು ಎರಡು ಕೋಟಿ ರೂಪಾಯಿ ಸಮರ್ಪಣೆಯಾಗಿರುವುದು ಶಿಷ್ಯರ ಮನೋಧರ್ಮವನ್ನು, ಶಿಷ್ಯರ, ಕಾರ್ಯಕರ್ತರ ಕಾರ್ಯತತ್ಪರತೆನ್ನು ಇದು ಸೂಚಿಸುತ್ತದೆ. ಜಾಗೃತ ಮನಸ್ಥಿತಿ ಇರುವ ಮಂಡಲ ಇದು. ಗುರುದೃಷ್ಟಿ ಭವನ ಭಕ್ತರ ಭಾವನೆಗಳ ಸದನ. ಶಿಷ್ಯಸ್ತೋಮದ ಶ್ರದ್ಧೆ ಇದರಲ್ಲಿ ಅಡಕವಾಗಿದೆ” ಎಂದು ಬಣ್ಣಿಸಿದರು.
ಇದನ್ನೂ ಓದಿ : ಕದಂಬ ನೌಕಾನೆಲೆಯ ನಿವೃತ್ತ ನೌಕರ ನಾಪತ್ತೆ
ಯಲ್ಲಾಪುರ(Yallapur) ತಹಶೀಲ್ದಾರ ಅಶೋಕ್ ಭಟ್ ಶ್ರೀಗಳಿಂದ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಅರವಿಂದ ಬಂಗಲಗಲ್ಲು, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ದೇವರು ನೀಡುವ ಆಶೀರ್ವಾದ ಗುರು: ರಾಘವೇಶ್ವರ ಶ್ರೀ