ಬೆಂಗಳೂರು (Bengaluru) : ಭಾರತೀಯ ಹವಾಮಾನ ಇಲಾಖೆ (IMD) ಬುಧವಾರದಂದು ಮುಂದಿನ ಎರಡು ದಿನಗಳ ಕಾಲ ಕರಾವಳಿ ಕರ್ನಾಟಕದ (Coastal Karnataka) ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ (Heatware Alert) ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

“ಕರಾವಳಿ ಕರ್ನಾಟಕದಲ್ಲಿ ೩೭-೩೯ ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಸಾಪೇಕ್ಷ ಆರ್ದ್ರತೆ (ಶೇ. ೪೦-೫೦) ಮತ್ತು ಗರಿಷ್ಠ ಗಾಳಿಯ ಉಷ್ಣತೆಯ ಹೆಚ್ಚಳದಿಂದಾಗಿ, ಮಾನವ ದೇಹವು ೪೦-೫೦ ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನವನ್ನು ಗ್ರಹಿಸುತ್ತದೆ” ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ (Heatware Alert) ಹೊರಡಿಸಿದೆ.

ಇದನ್ನೂ ಓದಿ : lorry hit / ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಲಾರಿ ಡಿಕ್ಕಿ

ಹೀಗಾಗಿ, ದೀರ್ಘಕಾಲದವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಭಾರವಾದ ಕೆಲಸ ಮಾಡುವ ಜನರಲ್ಲಿ ಅನಾರೋಗ್ಯದ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಶಿಶುಗಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು, ದುರ್ಬಲ ಜನರು ಹೆಚ್ಚಿನ ಆರೋಗ್ಯ ಕಾಳಜಿ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ : collision/ ಗೂಡ್ಸ್‌ ರಿಕ್ಷಾ ಡಿಕ್ಕಿಯಾಗಿ ಬಾಲಕಿ ಸಹಿತ ಇಬ್ಬರಿಗೆ ಗಾಯ

ಕಳೆದೆರಡು ದಿನಗಳಿಂದ ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚಿದ್ದು, ಹವಾಮಾನ ಇಲಾಖೆ ಯೆಲ್ಲೋವ್‌ ಅಲರ್ಟ್‌ ಘೋಷಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ತಾಪಮಾನದ ಪ್ರಕಾರ, ಕರಾವಳಿ ಪ್ರದೇಶದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗಳವಾರ ಗರಿಷ್ಠ ತಾಪಮಾನ ೩೮.೬ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇತರ ಎರಡು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ (Uttara Kannada) ಮತ್ತು ಉಡುಪಿಯಲ್ಲಿ (Udupi) ಕ್ರಮವಾಗಿ ೩೫.೮ ಮತ್ತು ೩೬.೨ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ : compete / ಜಾಲಿ ಪಪಂ ಕಟ್ಟಡ; ಕ್ರೆಡಿಟ್‌ಗಾಗಿ ಹಾಲಿ-ಮಾಜಿ ಶಾಸಕರ ಪೈಪೋಟಿ