ಭಟ್ಕಳ: ಮುರುಡೇಶ್ವರ (Murudeshwar) ಸಮೀಪದ ರಾಷ್ಟ್ರೀಯ ಹೆದ್ದಾರಿ(National Highway)–೬೬ರ ಹೊನ್ನಾವರ (Honnavar)–ಭಟ್ಕಳ (Bhatkal) ಮಾರ್ಗದ ಬಸ್ತಿಮಕ್ಕಿ ಬಳಿ ಅತೀವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಕಾರೊಂದು ಬೈಕ್‌ಗೆ ಡಿಕ್ಕಿ (car collision) ಹೊಡೆದ ಪರಿಣಾಮ ಬೈಕ್ ಸವಾರನೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾಯ್ಕಿಣಿ ಕುಂಬಾರಕೇರಿ ನಿವಾಸಿ ಸುರೇಂದ್ರ (೩೧) ಅವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಕಾರು ಚಾಲಕ ಹರ್ಷತ್ ಮೊಗೇರ (೨೧) ಹೊನ್ನಾವರದಿಂದ ಭಟ್ಕಳದತ್ತ ಅತೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಮುರುಡೇಶ್ವರ (Murudeshwar) ಬಸ್ತಿಮಕ್ಕಿ ಬಳಿ ಮುಂದೆ ಸಾಗುತ್ತಿದ್ದ ಮೊಟಾರ್ ಸೈಕಲ್‌ಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ (car collision).

ಇದನ್ನು ಓದಿ: Online fraud/ ಭಟ್ಕಳದಲ್ಲಿ ಆನ್‌ಲೈನ್ ವಂಚನೆ – ೧.೫೫ ಲಕ್ಷ ಹಣ ವರ್ಗಾವಣೆ

ಅಪಘಾತದಲ್ಲಿ ಬೈಕ್ ಸವಾರ ಉದಯ ಕುಂಬಾರ (೫೭) ಅವರಿಗೆ ಎರಡೂ ಕಾಲುಗಳು ಹಾಗೂ ಹೊಟ್ಟೆಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಂಬಂಧ ಆರೋಪಿತ ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಪ್ರವಾಸಿಗನ ರಕ್ಷಣೆ