ಭಟ್ಕಳ: ದುಷ್ಟಪ್ರವೃತ್ತಿ ಹಾಗೂ ಅಮಂಗಲ ವಿಚಾರಗಳನ್ನು ನಾಶಮಾಡಿ ಸತ್ಪ್ರವೃತ್ತಿಯ ಮಾರ್ಗವನ್ನು ತೋರಿಸುವ ಹೋಳಿ ಹಬ್ಬವನ್ನು (Holi festival) ತಾಲೂಕಿನ ಹಲವೆಡೆ ಸಂಭ್ರಮದಿಂದ ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಬ್ಬದ ಪೂರ್ವಸಂಧ್ಯೆಯಲ್ಲಿ ವಿವಿಧ ಭಾಗಗಳಲ್ಲಿ ಹೋಳಿ ದಹನ ಕಾರ್ಯಕ್ರಮಗಳು ನೆರವೇರಿದವು. ಬಂದರ್ ಭಾಗದ ಯುವಕ-ಯುವತಿಯರು ಬಣ್ಣದಾಟದಲ್ಲಿ ತೊಡಗಿಸಿಕೊಂಡರೆ, ಇತರ ಭಾಗಗಳ ಯುವಕರು ವಿಭಿನ್ನ ಬಣ್ಣದ ಟಿ-ಶರ್ಟ್ ಧರಿಸಿ ತಮ್ಮದೇ ಪಂಗಡಗಳನ್ನು ರಚಿಸಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಿದರು.
degree exams/ ಪದವಿ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಉತ್ತಮ ಫಲಿತಾಂಶ
ವಡೇರ ಮಠ ಕಂಪೌಂಡ್, ಮಣ್ಕುಳಿ ಗೆಳೆಯರು, ಮುಟ್ಟಳ್ಳಿ, ಮೂಡಭಟ್ಕಳ, ಸರ್ಪನಕಟ್ಟೆ, ತಲಾಂದ, ರೈಲ್ವೆ ನಿಲ್ದಾಣ, ಮುರ್ಡೇಶ್ವರ (Murudeshwar) ಹಾಗೂ ಶಿರಾಲಿ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ಪರಸ್ಪರ ಬಣ್ಣ ಹಚ್ಚಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
Omni overturned/ ಭಟ್ಕಳ ನಗರದಲ್ಲಿ ಶಾಲಾ ಮಕ್ಕಳಿದ್ದ ಓಮಿನಿ ಪಲ್ಟಿ
ಕೆಲವು ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹ ಸ್ನೇಹಿತರೊಂದಿಗೆ ಬಣ್ಣದಾಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಶಾಂತಿ ಹಾಗೂ ಸಹಭಾವದ ವಾತಾವರಣದಲ್ಲಿ ತಾಲೂಕಿನಾದ್ಯಂತ ಹೋಳಿ ಹಬ್ಬ (Holi festival) ಯಶಸ್ವಿಯಾಗಿ ಸಂಪನ್ನಗೊಂಡಿತು.



