ಭಟ್ಕಳ: ತಾಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ (Honors to achievers) ಕಾರ್ಯಕ್ರಮ ಶಿರಾಲಿಯ ಶ್ರೀ ಹಾದಿ ಮಾಸ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಘದ ಅಧ್ಯಕ್ಷ ರಮೇಶ್ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಯೂನಿವರ್ಸಿಟಿ ಧಾರವಾಡದ 2025ನೇ ಸಾಲಿನ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ‍್ಯಾಂಕ್ ಪಡೆದಿರುವ ಸಿಂಚನಾ ತಿಮ್ಮಪ್ಪ ಮಡಿವಾಳ ಹಾಗೂ ಕರ್ನಾಟಕ ಯೂನಿವರ್ಸಿಟಿ ಧಾರವಾಡದ ಕಬ್ಬಡ್ಡಿ ತಂಡಕ್ಕೆ ಆಯ್ಕೆ ಆಗಿ ಯೂನಿವರ್ಸಿಟಿ ಬ್ಲೂ ಆಗಿರುವ ಪವಿತ್ರ ರಘುರಾಮ ಮಡಿವಾಳ ಮತ್ತು ಕರ್ನಾಟಕ ಎಕ್ಸಾಮಿನೇಶನ್ ಬೋರ್ಡ್ ಅವರು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವ ನಾಗರಾಜ್ ಗಣೇಶ ಶಿರಾಲಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು (Honors to achievers).
ಇದನ್ನು ಓದಿ: Missing/ ನಾಪತ್ತೆಯಾಗಿದ್ದ ವಿಕಲಚೇತನ ಬಾಲಕಿ ರಕ್ಷಣೆ
ಸಂಘದ ಮಾರ್ಗದರ್ಶಕರಾಗಿರುವ ಆಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ ಬಿ ಮಡಿವಾಳ ಮಾತನಾಡಿ, ಅತ್ಯಂತ ಚಿಕ್ಕ ಸಮಾಜವಾಗಿರುವ ಮಡಿವಾಳ ಸಮಾಜದಲ್ಲಿ ಸಾಧನ ಮಾಡಿರುವ ಅನೇಕ ಪ್ರತಿಭಾವಂತರು ಎಲೆ ಮರೆಯ ಕಾಯಿಯಂತೆ ಇದ್ದು ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಮಾಜ ಬಂದವರನ್ನು ಒಗ್ಗೂಡಿಸುವ ಕಾರ್ಯ ಆಗಬೇಕಿದೆಂದು ಅನಿಸಿಕೆ ವ್ಯಕ್ತಪಡಿಸಿದರು. ಇನ್ನೋರ್ವ ಸಂಘದ ಮಾರ್ಗದರ್ಶಕಿ ಶ್ರೀವಲಿ ಪ್ರೌಡ ಶಾಲೆ ಚಿತ್ರಪುರದ ಮುಖ್ಯಾಧ್ಯಾಪಕಿ ಮಮತಾ ಮಡಿವಾಳ ಮಾತನಾಡುತ್ತಾ, ನಮ್ಮ ಸಮಾಜದ ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಸಂತಸದ ವಿಷಯ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದಲ್ಲಿ ಎಲ್ಲಾ ಸಮಾಜದವರು ನಮ್ಮನ್ನು ಗುರುತಿಸುವಂತಾಗುತ್ತದೆ. ಆದ್ದರಿಂದ ಉನ್ನತ ಶಿಕ್ಷಣ ಎಲ್ಲರ ಗುರಿ ಆಗಲಿ ಎಂದು ಹೇಳಿದರು.
ಇದನ್ನು ಓದಿ: Competition/ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಯಶಸ್ವಿ
ಸಂಘದ ಗೌರವ ಅಧ್ಯಕ್ಷ ವೆಂಕಟೇಶ್ ಮಡಿವಾಳ ಶಿರಾಲಿ, ಉಪಾಧ್ಯಕ್ಷ ವಿಶ್ವನಾಥ ಮಡಿವಾಳ, ಕಾರ್ಯದರ್ಶಿ ನಿತ್ಯಾನಂದ ತೀರ್ಥಹಳ್ಳಿ, ಖಜಾಂಚಿ ರಾಜೇಶ ಮಡಿವಾಳ ಹಾಗೂ ಇತರೆ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಂಘದ ಆರ್ಥಿಕ ಸಲಹೆಗಾರ ಕೃಷ್ಣಾನಂದ ಮಡಿವಾಳ ವಂದಿಸಿದರು. ಶಿಕ್ಷಕ ರಾಘವೇಂದ್ರ ಮಡಿವಾಳ ಕಾರ್ಯಕ್ರಮ ನಿರೂಪಣೆ ಮಾಡಿದರು.
ಇದನ್ನು ಓದಿ: debate competition/ ಶ್ರೀವಲ್ಲಿ ಪ್ರೌಢಶಾಲೆಯ ನಾಗರಾಜ ನಾಯ್ಕ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ



