ಭಟ್ಕಳ: ತಾಲೂಕಿನ ಸರ್ಪನಕಟ್ಟಾ ರೈಲ್ವೆ ಸೇತುವೆ ಸಮೀಪ ಭಾನುವಾರ ಬೆಳಗಿನ ಜಾವ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ಗುರುತು ಕೊನೆಗೂ ಪತ್ತೆಯಾಗಿದೆ(Identification). ಕೈಮೇಲಿನ ಸೀಕ್ ಗುರುತು ಆಧರಿಸಿ ತನಿಖೆ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಾರಸುದಾರರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತರನ್ನು ಗಣಪತಿ ಸಾತಾ ಹಳ್ಳೇರ (50) ಎಂದು ಗುರುತಿಸಲಾಗಿದ್ದು, ಅವರು ಹೊನ್ನಾವರ (Honnavar) ತಾಲೂಕಿನ ಮೇಲಿನ ಮೂಡಕಣಿ ಜನತಾ ಪ್ಲಾಟ್ ನಿವಾಸಿ ಎಂದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಗಣಪತಿ ಹಳ್ಳೇರ ಅವರು ಮೀನುಗಾರಿಕೆ ಕೆಲಸಕ್ಕಾಗಿ ಬೋಟಿಯಲ್ಲಿ ಭಟ್ಕಳಕ್ಕೆ (Bhatkal) ಆಗಮಿಸಿದ್ದರು. ಜನವರಿ ೨ರಂದು ಭಟ್ಕಳದ ತೆಂಗಿನಗುಂಡಿ ಹೆರ್ತಾರ ಕ್ರಾಸ್‌ನಿಂದ ತಮ್ಮ ಮನೆಗೆ ತೆರಳುವುದಾಗಿ ತಿಳಿಸಿ ಹೊರಟಿದ್ದ ಅವರು ಮನೆಗೆ ಮರಳದೇ ನಾಪತ್ತೆಯಾಗಿದ್ದರು.
ಇದನ್ನು ಓದಿ: Assault/ ಬೇಲಿಪ್ ಮೇಲೆ ಸಹೋದರರಿಬ್ಬರು ಹಲ್ಲೆ
ಈ ಕುರಿತು ಮೃತರ ಪುತ್ರರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಮೃತದೇಹದ ಗುರುತನ್ನು ದೃಢಪಡಿಸಿದ್ದು (identification), ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇದನ್ನು ಓದಿ: bike skidded/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್



