ಭಟ್ಕಳ: ಉಡುಪಿಯ (Udupi) ಚಿಟ್ಪಾಡಿ ಬಯಲು ರಂಗಮಂದಿರದಲ್ಲಿ ಡಿಸೆಂಬರ್ ೨೦ರಂದು ನಡೆಯಲಿರುವ ‘ವಿಶ್ವ ದೇವಡಿಗ ಮಹಾ ಸಮಾವೇಶ’ದ (World Devadiga Convention) ಸಿದ್ಧತೆಗಳು ಚುರುಕುಗೊಂಡಿವೆ. ಇದರ ಅಂಗವಾಗಿ, ‘ವಿಶ್ವ ದೇವಡಿಗ ಮಹಾಮಂಡಲ’ದ ಆಶ್ರಯದಲ್ಲಿ ಭಟ್ಕಳದಲ್ಲಿ ಭಟ್ಕಳ ಪ್ರದೇಶದ (Bhatkal region) ಪ್ರಾದೇಶಿಕ ಪೂರ್ವಭಾವಿ ಸಭೆ (Preparatory meeting) ನಡೆಸಲಾಯಿತು. ಭಟ್ಕಳ ದೇವಡಿಗ ಸಂಘದ ಅಧ್ಯಕ್ಷ ಲಕ್ಷ್ಮಣ ದೇವಡಿಗ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುಖ್ಯ ಭಾಷಣ ಮಾಡಿದ ವಿಶ್ವ ದೇವಡಿಗ ಮಹಾಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ, ಭಟ್ಕಳದೊಂದಿಗಿನ ತಮ್ಮ ನಿಕಟ ಒಡನಾಟವನ್ನು ಸ್ಮರಿಸುತ್ತ, ಮುಂಬರುವ ವಿಶ್ವ ದೇವಡಿಗ ಸಮಾವೇಶದ (World Devadiga Convention) ಹಿಂದಿರುವ ದೂರದೃಷ್ಟಿಯನ್ನು ವಿವರಿಸಿದರು. ಸಮಾವೇಶದ ಉದ್ದೇಶಗಳು, ಮಹತ್ವ ಮತ್ತು ಈ ಜಾಗತಿಕ ಕೂಟದ ಮೂಲಕ ಸಮುದಾಯವು ಒಗ್ಗೂಡಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.
Religious programs/ ಕಿತ್ರೆ ದೇವಿಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವ ದೇವಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು ದೇವಡಿಗ, ಸಮುದಾಯದ ಧ್ವನಿಯನ್ನು ಬಲಪಡಿಸುವಲ್ಲಿ ಈ ಸಮಾವೇಶದ ಮಹತ್ವ ವಿವರಿಸಿದರು. “ನಮ್ಮ ಸಮುದಾಯದ ಬೇಡಿಕೆಗಳು ಸರ್ಕಾರವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ಮಹಾ ಸಮಾವೇಶ ಅತ್ಯಗತ್ಯ” ಎಂದು ಹೇಳಿದರು.
Karate Competition/ ತುಷಾರ ಮಹಾಲೆ ಸಹಿತ ೧೬ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಸಭೆಯಲ್ಲಿ ಮುಂಬೈ ದೇವಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಡಿಗ, ವಿಶ್ವ ದೇವಡಿಗ ಮಹಾಮಂಡಲದ ಉಪಾಧ್ಯಕ್ಷ ನಾಗರಾಜ ಪಡುಕೋಣೆ, ಪ್ರಧಾನ ಕಾರ್ಯದರ್ಶಿ ಗಣೇಶ ಅಂಬಲ್ಪಾಡಿ, ಕಾರ್ಯದರ್ಶಿ ಯಾದವ ದೇವಡಿಗ ಹಾಗೂ ಉಡುಪಿ ದೇವಡಿಗ ಸಂಘದ ಅಧ್ಯಕ್ಷ ರತ್ನಾಕರ ಜಿ ಎಸ್ ಮಾತನಾಡಿ, ಸಮಾವೇಶದ ಮಹತ್ವ ಮತ್ತು ಸಮುದಾಯದ ಭಾಗವಹಿಸುವಿಕೆಯ ಅಗತ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಂಬೂರು, ಜನಾರ್ದನ ಉಪ್ಪುಂದ, ಚೆನ್ನಪ್ಪ ಮೊಯ್ಲಿ ಹಾಗೂ ಜಂಟಿ ಕಾರ್ಯದರ್ಶಿ ರಾಜು ದೇವಡಿಗ ಕುಂದಾಪುರ (Kundapura) ಮತ್ತಿತರರು ಉಪಸ್ಥಿತರಿದ್ದರು.
accident spot/ ಮುರ್ಡೇಶ್ವರದ ಕಾಯ್ಕಿಣಿಯ ರಾ ಹೆ-೬೬ರ ಅಪಘಾತ ಸ್ಥಳ ಪರಿಶೀಲಿಸಿದ ಎಸ್ಪಿ


