ಹುಬ್ಬಳ್ಳಿ (Hubballi): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC) ಕಾರ್ಮಿಕ ಸಂಘಟನೆಗಳ (workers union) ಜಂಟಿ ಕ್ರಿಯಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹಲವು ಬೇಡಿಕೆಗಳ ಈಡೇರಿಕೆಗಾಗಿ ನೋಟಿಸ್ ನೀಡಿರುವ ಸಾರಿಗೆ ನೌಕರರು, ಡಿ.೩೧ರಿಂದ ಅನಿರ್ದಿಷ್ಟಾವಧಿ ಮುಷ್ಕರ (bus strike ) ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ಕುರಿತು ಬುಧವಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Land Act/ ಕಾಯಿದೆ ಸಡಲೀಕರಣ ಅವಶ್ಯ: ರವೀಂದ್ರ ನಾಯ್ಕ

ಹಿಂದಿನ ವೇತನ ಹೆಚ್ಚಳ ೩೮ ತಿಂಗಳ ಬಾಕಿ ಪಾವತಿಸಬೇಕು. ೨೦೨೪ರ ಜನವರಿ ೧ರಿಂದ ಹೊಸ ವೇತನ ಪರಿಷ್ಕರಣೆ ಆಗಬೇಕು. ಉಚಿತ ಆರೋಗ್ಯ ಸೌಲಭ್ಯ, ನಗದುರಹಿತ ಆರೋಗ್ಯ ಸೌಲಭ್ಯ, ನಿವೃತ್ತ ನೌಕರರಿಗೆ ಸೌಲಭ್ಯ ಸೇರಿ ಹಲವು ಬೇಡಿಕೆಗಳಿಗೆ ಸಾರಿಗೆ ನೌಕರರು ಒತ್ತಾಯಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯಕ್ಕೆ ಸಾರಿಗೆ (KSRTC) ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಬೈಕುಗಳ ನಡುವೆ ಡಿಕ್ಕಿ; ಮಹಿಳೆಗೆ ಗಾಯ