ಭಟ್ಕಳ: ತಾಲೂಕಾಡಳಿತ, ತಾಲೂಕು ಪಂಚಾಯತ, ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ (celebration) ಧ್ವಜಾರೋಹಣವನ್ನು ಸಹಾಯಕ ಆಯುಕ್ತೆ ಡಾ. ನಯನ ನೆರವೇರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿವರ್ಷ ಆಗಸ್ಟ್ 15 ರಂದು ದೇಶಭಕ್ತಿ ಮತ್ತು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿ ನಾವೆಲ್ಲ ಅಭಿಮಾನ ಪಡುತ್ತೇವೆ, ಹೆಮ್ಮೆ ಅನುಭವಿಸುತ್ತೇವೆ (celebration). ಗಗನ ಚುಂಬಿಸಿ ಹಾರುವ ಕೇಸರಿ, ಬಿಳಿ, ಹಸಿರಿನ ಪತಾಕೆಯ ಕಣಕಣದೊಳಗೆ ಶತಶತಮಾನಗಳ ದಬ್ಬಾಳಿಕೆಯ ವಿರುದ್ಧದ ಕ್ರಾಂತಿಯ ಕಿಡಿಗಳಿವೆ. ಆ ಧ್ವಜದೊಳಗೆ ಇನ್ನೂ ಸ್ವಾತಂತ್ರ್ಯ ಸೇನಾನಿಗಳ ಉಸಿರಿದೆ. ದೇಶಕ್ಕಾಗಿ ಪ್ರಾಣ ತೆತ್ತ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಮಾತೃಭೂಮಿಗಾಗಿ ತನುವನ್ನೇ ಮೀಸಲಾಗಿಟ್ಟಿರುವ ಸೈನಿಕರ ಉಸಿರಿನ ಶಕ್ತಿ ಹಾಗೂ ಸಾಮರ್ಥ್ಯದಿಂದ ದೇಶದ ಧ್ವಜ ಹಾರುತ್ತದೆ. ಭಾರತದ ಸಾರ್ವಭೌಮತ್ವ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಇಡೀ ಜಗತ್ತಿಗೆ ನಮ್ಮ ದೇಶದ ಸಾಮರ್ಥ್ಯವನ್ನು ದೃಢಪಡಿಸುತ್ತದೆ. ಆ ಪತಾಕೆಯ ಇಂಚಿಂಚಿನಲ್ಲೂ ಹುತಾತ್ಮರ ಹೆಸರು ದೇಶಭಕ್ತಿಯ ನೆತ್ತರಿನಿಂದ ಬರೆಯಲ್ಪಟ್ಟಿದೆ ಮತ್ತು ಕೆತ್ತಲ್ಪಟ್ಟಿದೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ರಾಷ್ಟ್ರಧ್ವಜಾರೋಹಣ ಮಾಡದ ರಾಷ್ಟ್ರೀಕೃತ ಬ್ಯಾಂಕ್
ಮಂಗಲ ಪಾಂಡೆ, ಖುದೀರಾಮ್, ಭಗತ್ ಸಿಂಗ್, ರಾಜ್ ಗುರು, ಚಂದ್ರಶೇಖರ ಅಜಾದ್, ಸುಖದೇವ್, ರಸಬಿಹಾರಿ ಭೋಸ್ ರಂಥ ಸಾವಿರಾರು ಯುವಕರು ತಮ್ಮ ಜೀವವನ್ನು ಬಲಿಕೊಟ್ಟು, ಬ್ರಿಟಿಷರಿಗೆ ಎದೆಕೊಟ್ಟು ಬಲಿಯಾದರು. ಸ್ವಾತಂತ್ರ್ಯದ ಈ ಸುದೀರ್ಘ ಯಾತ್ರೆಯಲ್ಲಿ ಗಾಂಧೀಜಿಯವರ ನಾಯಕತ್ವ ಅತ್ಯಂತ ಸ್ಮರಣೀಯ. ಬರಿಗೈ ಫಕೀರನ ಹಾಗೆ ಯಾವ ಸ್ವಾರ್ಥವನ್ನೂ ಬಯಸದೆ ಬ್ರಿಟಿಷರನ್ನು ಜಯಿಸುವುದು ಸಾಮಾನ್ಯದ ಮಾತಲ್ಲ. ಜನರಿಗಾಗಿ, ದೇಶಕ್ಕಾಗಿ ಜೀವ ತೆತ್ತ ಅಸಮಾನ್ಯ ಆತ್ಮವದು. ಅಸಂಖ್ಯ ವೀರ ವನಿತೆಯರು ಈ ಸ್ವಾತಂತ್ರ್ಯದ ಅಗ್ನಿಕುಂಡದಲ್ಲಿ ದಹಿಸಿ ಹೋದರು. ಪ್ರೀತಿಲತಾ ವಡ್ಡೆದಾರ್, ಅರುಣಾ ಅಸಫ್ ಅಲಿ, ಮೇಡಂ ಭಿಕಾಜಿ ಕಾಮಾ, ಸುಚೇತಾ ಕೃಪಲಾನಿ, ಲಕ್ಷ್ಮೀ ಸೆಹಗಲ್, ಉಷಾ ಮೆಹತಾರಿಂದ ಹಿಡಿದು ಚರಿತ್ರೆಯ ಪುಟಗಳಲ್ಲಿ ದಾಖಲಾಗದೇ, ಮರೆಯಲ್ಲೇ ಉಳಿದು ಮರೆಯಾದ ಅಸಂಖ್ಯ ಮಹಿಳೆಯರು ಸ್ವಾತಂತ್ರ್ಯ ಕಹಳೆ ಉದಿದ್ದು ಸಾಮಾನ್ಯ ಸಂಗತಿಯಲ್ಲ, ಅವರೆಲ್ಲರ ತ್ಯಾಗದ ಫಲವೇ ಈ ಸ್ವಾತಂತ್ರ್ಯ . ಬಲಿದಾನ ಮತ್ತು ನೆತ್ತರ ತರ್ವಣದಿಂದ ಪಡೆದ ಈ ಸ್ವಾತಂತ್ರ್ಯವನ್ನು ನಮ್ಮ ಹೊರಗಿನ ಮತ್ತು ಒಳಗಿನ ವೈರಿಗಳಿಂದ ರಕ್ಷಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇದನ್ನೂ ಓದಿ : ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ |
ಈ ಪ್ರಕೃತಿ ನಮ್ಮ ತಾಯಿ ಇದ್ದ ಹಾಗೆ. ಮನುಷ್ಯ ಪಕೃತಿಯ ವಿರುದ್ಧ ಹೋದಾಗಲೆಲ್ಲ ಮನುಜ ಕುಲ ಗಂಡಾಂತರಗಳನ್ನು ಎದುರಿಸಬೇಕಾಗಿದೆ. ಹಾಗಾಗಿ ನಮ್ಮ ಅಭಿವೃದ್ಧಿಯು ನಿಸರ್ಗದ ಪರವಾಗಿರಬೇಕು. ಆ ದಿಶೆಯಲ್ಲಿ ನಮ್ಮ ಆಲೋಚನೆ ಇರಬೇಕು. ನಿಸರ್ಗದ ಜೊತೆ ಜೊತೆಗೆ ನಾವು ಬದುಕು ಕಟ್ಟಿಕೊಳ್ಳಬೇಕು. ಹಸಿರಿದ್ದರೆ ಉಸಿರು ಎಂಬ ಮಾತನ್ನು ನಾವು ನೆನಪಿಟ್ಟುಕೊಳ್ಳಬೇಕು. ಆ ಬಗ್ಗೆ, ನಾವೆಲ್ಲ ಆಲೋಚಿಸೋಣ ಎಂದು ಹೇಳಿದರು.
ಇದನ್ನೂ ಓದಿ : ಭಟ್ಕಳದ ಹೆಮ್ಮೆಯ ಪುತ್ರ ನಾಗರಾಜ ದೇವಡಿಗ
ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯ ಪ್ರಥಮ , ದ್ವಿತೀಯ, ತೃತೀಯ ಬಂದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಪೊಲೀಸ್ ಇಲಾಖೆ, ಎನ್.ಸಿ.ಸಿ., ಸ್ಕೌಟ್ & ಗೈಡ್ಸ್ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಪಾಲ್ಗೊಂಡವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸುದ್ದಿಗೆ ಸಂಬಂಧಿತ ವಿಡಿಯೋ ಇನ್ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.