ಭಟ್ಕಳ : ೭೮ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭಟ್ಕಳ ತಾಲೂಕಿನ ವಿವಿಧ ಜನನಿಬಿಡ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ತಂಡ ಭೇಟಿ ನೀಡಿ ತಪಾಸಣೆ (inspection) ನಡೆಸಿದವು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೇಶದ ಮೂಲೆ ಮೂಲೆಯಲ್ಲೂ ನಾಳೆ ಸ್ವಾತಂತ್ರ್ಯ ಉತ್ಸವದ ಸಂಭ್ರಮ ಮನೆಮಾಡಲಿದೆ. ಭಾರತದ ೭೮ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದೇಶದ ಮೂಲೆ ಮೂಲೆಗಳಲ್ಲೂ ತಿರಂಗ ರಾರಾಜಿಸಲಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದಲ್ಲಿಯೂ ಕೂಡ ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಇದನ್ನೂ ಓದಿ : ರಾಮಭಕ್ತಿಯಿಂದ ಜೀವಯಾನ ದೇವಯಾನವಾಗಬಲ್ಲದು

ಭಟ್ಕಳ ತಾಲೂಕು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ತಂಡ ಭಟ್ಕಳ ರೈಲ್ವೆ ನಿಲ್ದಾಣ ಹಾಗೂ ಭಟ್ಕಳ ನ್ಯಾಯಾಲಯದ ಒಳ ಭಾಗ ಮತ್ತು ಒಳ ಭಾಗದಲ್ಲಿ ತಪಾಸಣೆ (inspection) ನಡೆಸಿತು.

ವಿಡಿಯೋ ಸಹಿತ ಇದನ್ನೂ ಓದಿ : ಬಡವರಿಗೆ ಅವಧಿ ಮೀರಿದ ಔಷಧಿ !?

ಕಾರ್ಯಾಚರಣೆಯಲ್ಲಿ ಮೇಲ್ವಿಚಾರಕರಾದ ಅನಿಲ ನಾಯ್ಕ, ಸಂಜಯ ಭುವಿ , ಶ್ವಾನ ನಿರ್ವಾಹಕ ಸಂತೋಷ ನಾಯಕ ಮತ್ತು ಶ್ವಾನ ಮಾರ್ವೆಲ್ ಪಾಲ್ಗೊಂಡಿತ್ತು.