ಭಟ್ಕಳ (Bhatkal): ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ (guarantee scheme) ಅಭಿವೃದ್ದಿ ಕೆಲಸಗಳು ನಿಂತಿವೆ ಎಂದು ವಿರೋದ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಆರೋಪಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಶನಿವಾರ ಕೋಣಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡದ ಜನಸ್ಪಂದನ (Janaspandana) ಸಭೆಯಲ್ಲಿ ಸಾರ್ವಜನಿಕರನ್ನುದೇಶಿಸಿ ಮಾತನಾಡಿದರು. ನಮ್ಮ ಸರ್ಕಾರ ಗ್ರಾರಂಟಿ ಯೋಜನೆಯ (guarantee scheme) ಜೊತೆಗೆ ರಸ್ತೆ, ಮನೆ, ಬಾವಿ ಸೇರಿದಂತೆ ಅಗತ್ಯ ಅಭಿವೃದ್ದಿ ಕೆಲಸಗಳಿಗೂ ಅನುದಾನ ಒದಗಿಸುತ್ತಿದೆ. ನಾನು ಶಾಸಕನಿದ್ದಾಗ ೧೫೦೦ ಕೋಟಿ ರೂ. ಅನುದಾನ ತಂದಿದೆ. ಈಗ ಸಚಿವನಾಗಿದ್ದೇನೆ. ೧೦ ಸಾವಿರ ಕೋಟಿ ಅನುದಾನ ತಂದು ಅಭಿವೃದ್ದಿ ಮಾಡುವ ಗುರಿ ಹೊಂದಿದ್ದೇನೆ. ರಾಜ್ಯ, ಜಿಲ್ಲೆಯ ಅಭಿವೃದ್ದಿ ಗುರಿ ನನ್ನ ಮೇಲೆ ಇದ್ದರೂ ನನ್ನನ್ನು ಶಾಸಕನಾಗಿ ಮಾಡಿದ, ಮಂತ್ರಿಯಾಗಲು ಕಾರಣಿಕರ್ತರಾದ ನನ್ನ ಕ್ಷೇತ್ರದ ಅಭಿವೃದ್ದಿಯನ್ನು ನಾನು ನಿರ್ಲಕ್ಷಿಸಲಾರೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ :  ಮೀನು ಲಾರಿಯಲ್ಲಿ ಜಾನುವಾರು ಸಾಗಾಟ !

ನಾನು ಶಾಸಕನಾಗುವ ಪೂರ್ವದಲ್ಲಿ ಮಾತುಕೊಟ್ಟಂತೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಸ್ಪಂದನಾ ಸಭೆ ನಡೆಸಿ ಜನರ ಸಮಸ್ಯೆಯನ್ನು ಆಲಿಸಿ ಪರಿಹರಿಸಲು ಪ್ರಯತ್ನ ಮಾಡುವೆನು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇಂಕಟೇಶ ನಾಯ್ಕ, ಕೋಣಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗಪ್ಪ ಗೊಂಡ, ಉಪಾಧ್ಯಕ್ಷ ದೇವಿ ಗೊಂಡ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯೆ ಜಯಲಕ್ಷ್ಮೀ ಗೊಂಡ,, ಕೋಣಾರ ಗ್ರಾಮ ಪಂಚಾಯ್ತಿ ಸದಸ್ಯರು ವೇದಿಕೆಯಲಿದ್ದರು.

ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಭಾಷಣವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಜ್ವರ ಬಂದಿದ್ದಕ್ಕೆ ಗುಳಿಗೆ ತಿಂದ ಮೀನುಗಾರ ಕೊನೆಯುಸಿರು