ಭಟ್ಕಳ (Bhatkal) : ತಾಲೂಕಿನ ಹಾಡುವಳ್ಳಿ ಸಮೀಪ ಇರುವ ಸಾಗರ (Sagar) ತಾಲ್ಲೂಕಿನ ಹೊಗೆವಡ್ಡಿಯ (Hogevaddi) ಶ್ರೀ ಕೋಟೆ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಫೆಬ್ರವರಿ ೬ರ ಗುರುವಾರದಿಂದ ೮ರ ಶನಿವಾರ ತನಕ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಫೆ. ೬ ರಂದು ಸಂಜೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ೭ ಗಂಟೆಗೆ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮವಿದೆ. ಫೆ. ೭ರಂದು ಬೆಳಿಗ್ಗೆ ೮ ಗಂಟೆಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ. ೮ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಕ್ಷೇತ್ರದ ಅತಿಥಿ
ಕಲಾವಿದರಿಂದ ನೃತ್ಯ, ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಧರ್ಮದರ್ಶಿ ಅನಂತ ನಾಯ್ಕ ಉಗ್ರಾಣಿಮನೆ ತಿಳಿಸಿದ್ದಾರೆ.

ಇದನ್ನೂ ಓದಿ: ಚಾಕು ಇರಿದವರಿಗೆ ಗುಂಡಿನೇಟು