ಬೆಂಗಳೂರು (Bengaluru) : ಹಲೋ…ದೋಸ್ತ…ನಾನು…ಕಣಪ್ಪ…ಗೊತ್ತಾತಿಲ್ಲೋ..! ಹೇ…ಜೋಶಿ (Pralhad Joshi)…ಖರೇನ ನೀನ್… ನೀ..ಫೋನ್ ಮಾಡಿದ್ದೀ…ಖುಷೀ ಆತ್ ನೋಡ್…ಮತ್ತೇನ್ ಹೆಂಗಿದೀ…ಫ್ರೀ ಮಾಡ್ಕೊಂಡ್ ಫೋನ್ ಮಾಡಿದ್ದೀ ಅಂದ್ರ…ವಿಶೇಷ ಏನಾರ ಇರ್ಲೇಬೇಕಲ್ಲಾ…ಮತ್ತ? ಏನಿಲ್ಲಪ್ಪ…ಬಹಳ ದಿನ ಆದ್ವು ನಾವ್ ಗೆಳೆಯರೆಲ್ಲಾ ಸೇರ್ದ…ಅದ್ಕ ಒಮ್ಮೆ ಎಲ್ಲಾರೂ ಕೂಡೋಣ ಅಂತಾ ಅಷ್ಟೇ..! ಹೋಳಿ ಹಬ್ಬದ ದಿನ ಸ್ವಲ್ಪ ಸೌಡ್ ಮಾಡ್ಕೊಂಡ್ರ.. ಬೆಂಗ್ಳೂರಲ್ಲೇ ಒಷ್ಟ್ರೂ ಸೇರಾನ್..ಅಂದ್ಕೊಂಡೀನಿ.. ನೀ..ಏನಂತೀ..? ನೀನು ಒನ್ಸಾರಿ ಆಮೇಲ್ ನೆನಪ್ ಮಾಡು ಎಲ್ರಿಗೂ…ಸರಿ ಹಾಗಾದ್ರ ಹೋಳಿ ದಿನ ಸಿಗೋಣ…ಬಾಯ್.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಧಾರವಾಡ (Dharwad) ಸಂಸದ, ಕೇಂದ್ರ ಸಚಿವ (Central Minister) ಪ್ರಲ್ಹಾದ ಜೋಶಿ (Pralhad Joshi) ಅವರು ೧೯೭೮ರಲ್ಲಿ ಹುಬ್ಬಳ್ಳಿಯ (Hubballi) ನ್ಯೂ ಇಂಗ್ಲೀಷ್ ಸ್ಕೂಲ್ ಅಲ್ಲಿ ಮೆಟ್ರಿಕ್ ಕಲೀತಿದ್ದಾಗಿನ ಬಾಲ್ಯದ ಆಪ್ತ ಸ್ನೇಹಿತರಿಗೆಲ್ಲಾ (childhood friends) ಖುದ್ದು ಕರೆ ಮಾಡಿ “ಸ್ನೇಹಕೂಟ”ಕ್ಕೆ ಆಹ್ವಾನಿಸಿದ್ದರು. ಅಂತೆಯೇ ಹೋಳಿ ಹಬ್ಬದ ದಿನ ಬೆಂಗಳೂರಿನಲ್ಲಿ ಹುಬ್ಬಳ್ಳಿಯ ಅಷ್ಟೂ ಮಂದಿ ಬಾಲ್ಯದ ಸ್ನೇಹಿತರು ಸೇರಿ ನಲಿದಾಡಿದರು. ಅದೆಷ್ಟೋ ವರ್ಷಗಳ ಬಳಿಕ ಆದ ಸ್ನೇಹಿತರ ಸಮಾಗಮದ ಖುಷಿಗೆ ಪಾರವೇ ಇರಲಿಲ್ಲ.

ಇದನ್ನೂ ಓದಿ : DK Shivkumar/ ಕಾಂಗ್ರೆಸ್‌ ಫ್ಲೆಕ್ಸ್‌ ಬ್ಯಾನರ್‌ ವಿರುದ್ಧ ಡಿಕೆಶಿ ಕಿಡಿ !

ಸ್ನೇಹಿತರು ಕಂಡೊಡನೆ.. “ಏನ್ ದೋಸ್ತ…ಹೆಂಗ ಇದ್ದೀ… ಎಷ್ಟು ದಿವಸದ ಮ್ಯಾಲೆ ಭೇಟಿ…ಏನ್ತಾನ…ಎಲ್ಲಾ ಆರಾಮ ಅಲಾ ಮತ್ತ…” “ಮತ್ತೇನಪಾ…ಮಕ್ಕಳದೆಲ್ಲಾ ಲಗ್ನ ಆತ ಇಲ್ಲ… ಎಷ್ಟ ಮೊಮ್ಮಕ್ಕಳು ಈಗ..?” “ಹೆಂಗಿದ್ದಿ ದೋಸ್ತ… ಏನ್ ಎಲ್ಲಾರೂ ಮಕ್ಕಳ ಜೊತಿ ಬೆಂಗ್ಳೂರ್ ಸೇರಿ…ಹುಬ್ಬಳ್ಳಿ ಮರೆತ ಬಿಟ್ಟಾಂಗ್ ಕಾಣ್ತದ…” “ನೀ ಏನಪಾ…ದೊಡ್ಡ ಮನಷ್ಯಾ ಈಗ…union minister. ಫುಲ್ ಬ್ಯುಸಿ. ಅದ್ಯಾವಾಗ ಸೌಡ್ ಇರ್ತಿಯೋ ನಾ ಕಾಣೆ..ಇವತ್ ಸಿಕ್ಕಿದ್ ಹೋಳಿ ಹಬ್ಬದಷ್ಟ ಖುಷಿ ಆತ್ ನೋಡ್.”

ಇದನ್ನೂ ಓದಿ : Holi/ ಭಟ್ಕಳದಲ್ಲಿ “ಆಮ್ಗೆಲ್‌ ಹೋಳಿ” ಸಂಭ್ರಮ

ಕೆಲ ದೋಸ್ತರನ್ನಂತೂ ಭೆಟ್ಟಿ ಆಗದ ಎಷ್ಟೋ ವರ್ಷಗಳೇ ಉರುಳಿದ್ವು ಆದ್ರ ಇವತ್ತು ಯೋಗ ಕೂಡಿ ಬಂತು ನೋಡ್ರಪ್ಪ…ಎನ್ನುತ್ತಲೇ ಎಲ್ಲರಲ್ಲೂ ಮಂದಹಾಸ..ಆದರದ ಆತ್ಮೀಯತೆ…! ಹಿಂಗ ಒಬ್ಬೊಬ್ರೂ ಬಾಲ್ಯ ಸ್ನೇಹಿತ್ರು ಪರಸ್ಪರ ಹೋಳಿ ಹಬ್ಬದ (Holi Festival) ಶುಭಾಶಯ ಹಂಚಿಕೊಳ್ಳುತ್ತ ತುಸು ಹೊತ್ತು ಸ್ನೇಹ ಕೂಟದಲ್ಲಿ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದ ಆಟ…ಆ ಹುಡುಗಾಟ…’ ಎನ್ನುವಂತೆ ತುಸು ಹೊತ್ತು ಹರಟೆ ಹೊಡೆದು ನಕ್ಕು ನಲಿದರು.

ಇದನ್ನೂ ಓದಿ : police raid/ ಗರ್‌ ಗರ್‌ ಮಂಡ್ಲ ಆಡುತ್ತಿದ್ದ ೨೬ ಜನರ ವಿರುದ್ಧ ಪ್ರಕರಣ

ತಮ್ಮ ಜೀವನಕ್ಕೆ ಅಕ್ಷರದ ಅಡಿಪಾಯ ಹಾಕಿಕೊಟ್ಟ ಮಾಸ್ತರುಗಳನ್ನು ಸ್ಮರಿಸಿಕೊಂಡರು. ಆ ಒಂದು ಕ್ಷಣ ಮತ್ತೆ ಎಲ್ಲರೂ ವಿದ್ಯಾರ್ಥಿ ಜೀವನದ ಗತ ಸನ್ನಿವೇಶಗಳ ನೆನಪಿನಂಗಳಕ್ಕೆ ಜಾರಿದರು. ತಮಗೆ ಪ್ರೀತಿಸಿ, ಶಿಕ್ಷಿಸಿ ತಿದ್ದಿ ತೀಡಿದ, ಹುಬ್ಬಳ್ಳಿಯಲ್ಲಿ ಜ್ಞಾನ ದಾಸೋಹ ಉಣಬಡಿಸಿದ ಗುರುಗಳನ್ನ ನೆನೆಯುತ್ತಲೇ ನಮಿಸಿದರು. ಲಕ್ಷ್ಮೇಶ್ವರ ಸರ್, ಕೊಪ್ಪರ ಸರ್ , ಭುಜಂಗ ಸರ್, ನಾತು ಸರ್, ಎನ್.ಜಿ. ರಾಯಚೂರು ಸರ್, ಮುದಕವಿ ಸರ್ ಹೀಗೆ ಎಲ್ಲರನ್ನೂ ಒಂದು ಕ್ಷಣ ಕಣ್ಮುಂದೆ ತಂದುಕೊಂಡರು.  ಜತೆಗೂಡಿ ಭೋಜನ ಸವಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಗೆಳೆಯರ ಯೋಗ ಕ್ಷೇಮ ವಿಚಾರಿಸಿಕೊಂಡರು.

ಚಿತ್ರನಟ ಅನಂತನಾಗ ಅವರನ್ನು ಸಂಸದ ಪ್ರಲ್ಹಾದ ಜೋಶಿ ಭೇಟಿ ಮಾಡಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.