ಸಿದ್ದಾಪುರ (Siddapura) : ತಾಲೂಕಿನಲ್ಲಿ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಶಂಕರ ಕೋಲಸಿರ್ಸಿ (೪೪) ಇಂದು ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನ ಹೊಂದಿದ್ದಾರೆ (Journalist death).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಿನ್ನೆಯವರೆಗೂ ಪತ್ರಿಕಾ ಕ್ಷೇತ್ರದಲ್ಲಿ ಚಟುವಟಿಕೆಯಿಂದಲೇ ಕೆಲಸಮಾಡಿದ್ದ ಶಿವಶಂಕರ ಅವರಿಗೆ ತಡರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ (Journalist death). ಅವರ ನಿಧನದ ಸುದ್ದಿ ಜಿಲ್ಲೆಯ ಪತ್ರಕರ್ತರಿಗೆ ಬರಸಿಡಿಲು ಬಡಿದ ಅನುಭವವಾಗಿದೆ. ಶಿವಶಂಕರ ಒರ್ವ ಉತ್ತಮ ಜನಸ್ನೇಹಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಅವರು TV9 ಪತ್ರಕರ್ತರಾಗಿ ಕಾರವಾರದಲ್ಲಿ(Karwar) ಕೆಲಸಮಾಡಿದ್ದರು. ನಂತರ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದ್ದರಿಂದ ಸಿದ್ದಾಪುರದಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರಿಸಿದ್ದರು.
ಇದನ್ನೂ ಓದಿ : Complaint/ ಶಾಲಾ ವಾಹನ ಚಾಲಕನ ವಿರುದ್ಧ ದೂರು ದಾಖಲು
ಕನ್ನಡ ಜನಾಂತರಂಗ, ಕರಾವಳಿ ಮುಂಜಾವು, ಕರಾವಳಿ ಪ್ರಭ ಪತ್ರಿಕೆಗಳಲ್ಲಿ ಅವರು ಕಾರ್ಯಹಿಸಿದ್ದರು. ಸದ್ಯ ಅವರು ರಾಜ್ ನ್ಯೂಸ್ ಕರಾವಳಿ, ರಾಜ್ ಬಿಗ್ ಬ್ರೇಕಿಂಗ್ ಸುದ್ದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾಧ್ಯಮ ಕ್ಷೇತ್ರದ ಜೊತೆಗೆ ಬ್ಯಾಂಕ್ ಆಫ್ ಬರೋಡಾದ ಆರ್ಥಿಕ ಸಾಕ್ಷರತೆ ಕೇಂದ್ರದಲ್ಲಿ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಅಪಾರ ಬಂಧು-ಬಳಗವಿದೆ.
ಇದನ್ನೂ ಓದಿ : Robotics/ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಬಹುಮಾನ