ಭಟ್ಕಳ (Bhatkal) : ಇಲ್ಲಿನ ಕೋ ಆಪರೇಟಿವ್ ಸೊಸೈಟಿಯೊಂದರ ಲಾಕರ್ ಕಳವು ಮಾಡಿದ್ದ ಆರೋಪಿಯನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ (judicial custody) ವಿಧಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ರಂಗೀನಕಟ್ಟಾ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯಲ್ಲಿ ಯಾರೋ ಕಳ್ಳರು ಕಳೆದ ವರ್ಷ ಏ.೧೬ರಂದು ಸಾಯಂಕಾಲ ೫.೩೦ ಗಂಟೆಯಿಂದ ಏ.೧೭ರ ಬೆಳಗ್ಗೆ 9-30 ಗಂಟೆಯ ನಡುವಿನ ಅವಧಿಯಲ್ಲಿ ಒಟ್ಟು ನಗದು ೧,೭೦,೯೬೮ ರೂಪಾಯಿ ಇದ್ದ ಲಾಕರ್ ಕಳುವು ಮಾಡಿದ್ದ. ಇದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ಈ ಬಗ್ಗೆ ಭಟ್ಕಳ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿತ್ತು.
ಇದನ್ನು ಓದಿ : Ramzan shops/ ರಂಜಾನ್ ಮಳಿಗೆ ವಿರುದ್ಧ ಅಪಸ್ವರ
ಉತ್ತರ ಕನ್ನಡ (Uttara Kannada) ಪೊಲೀಸ್ ಅಧೀಕ್ಷಕ (police superintendent) ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಕೃಷ್ಣಮೂರ್ತಿ, ಭಟ್ಕಳ ಉಪ ವಿಭಾಗಉಪ ಅಧೀಕ್ಷಕ (dySP) ಮಹೇಶ ಎಂ.ಕೆ. ಮಾರ್ಗದರ್ಶನದಲ್ಲಿ ತನಿಖೆ ನಡೆದಿತ್ತು. ಈ ಪ್ರಕರಣದ ತನಿಖಾಧಿಕಾರಿ ಸಂತೋಷ ಕಾಯ್ಕಿಣಿ ಈ ಪ್ರಕರಣದ ಆರೋಪಿ ಪತ್ತೆಯ ಕುರಿತು ತಂಡ ರಚಿಸಿದ್ದರು. ಆರೋಪಿತನಾದ ಭಟ್ಕಳದ ಕಿದ್ವಾಯಿ ರಸ್ತೆಯ ಮೊಹಮ್ಮದ ರಾಯಿಕ್ ತಂದೆ ಮೊಹಮ್ಮದ ಗೌಸ್ (೨೪) ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : LHB Coach/ ಆಧುನಿಕಗೊಳ್ಳಲಿದೆ ಮುರುಡೇಶ್ವರ-ಬೆಂಗಳೂರು ರೈಲು
ಆರೋಪಿತನಿಂದ ೪೦ ಸಾ.ರೂ ನಗದು ಹಣವನ್ನು ಜಪ್ತ ಪಡಿಸಿಕೊಳ್ಳಲಾಗಿದೆ. ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ಆರೋಪಿತನು ನ್ಯಾಯಾಂಗ ಬಂಧನದಲ್ಲಿ (judicial custody) ಇದ್ದಾನೆ. ಈ ಆರೋಪಿತನ ಮೇಲೆ ಈಗಾಗಲೇ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿವಿಧ ಪೊಲೀಸ ಠಾಣೆಗಳಲ್ಲಿ ಒಟ್ಟು ೧೬ ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಡಿಯೋ ಸಹಿತ ಇದನ್ನು ಓದಿ : Punit Rajkumar/ ಅಪ್ಪು ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ
ಈ ಕಾರ್ಯಾಚರಣೆಯಲ್ಲಿ ಭಟ್ಕಳ ಗ್ರಾಮಾಂತರ ವೃತ್ತ ಸಿ.ಪಿ.ಐ. ಸಂತೋಷ ಕಾಯ್ಕಿಣಿ, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ. ನವೀನ್ ಎಸ್. ನಾಯ್ಕ, ಪಿ.ಎಸ್.ಐ. ಶಾಂತಿನಾಥ ಪಾಸಾನೆ ಹಾಗೂ ಸಿಬ್ಬಂದಿಯವರಾದ ಸಿ.ಹೆಚ್.ಸಿ.ಗಳಾದ ನಾರಾಯಣ ನಾಯ್ಕ, ದಿನೇಶ ನಾಯಕ, ಅರುಣ ಪಿಂಟೋ, ದೀಪಕ ಎಸ್. ನಾಯ್ಕ, ಮದಾರಸಾಬ್ ಚಿಕ್ಕೇರಿ, ಕಿರಣಕುಮಾರ ನಾಯ್ಕ, ನಾಗರಾಜ ಮೊಗೇರ, ಸಿ.ಪಿ.ಸಿ.ಗಳಾದ ಕೃಷ್ಣಾ ಎನ್.ಜಿ., ಲೊಕೇಶ ಕತ್ತಿ, ಜಗದೀಶ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ ಹಾಗೂ ಕಿರಣ ಪಾಟೀಲ ಪಾಲ್ಗೊಂಡಿದ್ದರು.
ವಿಡಿಯೋ ಸಹಿತ ಇದನ್ನು ಓದಿ : Protest/ ಗೋ ಸಾಗಾಟ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ